ADVERTISEMENT

ಜಂಟಿ ಸಮರಾಭ್ಯಾಸ ಅಬಾಧಿತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಸೇನಾ ಬಜೆಟ್‌ನಲ್ಲಿ ಭಾರಿ ಕಡಿತ ಮಾಡಲು ಉದ್ದೇಶಿಸಿರುವ ತನ್ನ ಕ್ರಮವು ಭಾರತದೊಂದಿಗಿನ ಜಂಟಿ ಸಮರಾಭ್ಯಾಸ ಹಾಗೂ ಸೇನಾ ಬಾಂಧವ್ಯಕ್ಕೆ ಯಾವುದೇ ಧಕ್ಕೆ ಎಸಗುವುದಿಲ್ಲ ಎಂದು ಅಮೆರಿಕ ಸಮರ್ಥನೆ ಮಾಡಿಕೊಂಡಿದೆ.

`ಭಾರತದೊಂದಿಗಿನ ಮೈತ್ರಿ ವೃದ್ಧಿಯು ನಮ್ಮ ಸರ್ಕಾರಕ್ಕೆ ಆದ್ಯತೆಯ ವಿಷಯವಾಗಿದೆ. ಆ ರಾಷ್ಟ್ರದೊಂದಿಗಿನ ದ್ವಿಪಕ್ಷೀಯ ಬಾಂಧ್ಯವು ಎರಡೂ ರಾಷ್ಟ್ರಗಳಿಗೆ ಲಾಭ ತರುತ್ತದೆ~ ಎಂದು ರಕ್ಷಣಾ ಇಲಾಖೆ ವಕ್ತಾರೆ ಕಮಾಂಡರ್ ಲೆಸ್ಲಿ ಹಲ್ ರೈಡ್ ವಿವರಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ಬಿಡುಗಡೆ ಮಾಡಿದ ರಕ್ಷಣಾ ಇಲಾಖೆ ಮಾರ್ಗದರ್ಶಿಯು, ಮುಂದಿನ 10 ವರ್ಷಗಳಲ್ಲಿ 48,700  ಕೋಟಿ ಡಾಲರ್ ಸೇನಾ ವೆಚ್ಚ ಕಡಿತಗೊಳಿಸುವ ಪ್ರಸ್ತಾವ ಒಳಗೊಂಡಿದೆ.

ADVERTISEMENT

ಎರಡೂ ರಾಷ್ಟ್ರಗಳು ಪ್ರಸಕ್ತ ಸಾಲಿನಲ್ಲಿ ಶತ್ರುಜೀತ್, ಯುದ್ಧ್ ಅಭ್ಯಾಸ್, ಹಬು ನಾಗ್, ಮಲಬಾರ್ ಮತ್ತು ರಿಮ್‌ಪ್ಯಾಕ್ ಜಂಟಿ ಸಮರಾಭ್ಯಾಸಗಳನ್ನು ಹಮ್ಮಿಕೊಂಡಿದ್ದು, ಇವು ಯಾವುದೇ ಅಡೆತಡೆಯಿಲ್ಲದೆ ಪೂರ್ವನಿಗದಿಯಂತೆ ನಡೆಯುತ್ತಿವೆ ಎಂದೂ ಲೆಸ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.