ADVERTISEMENT

ಜಗತ್ತು ಪರಮಾಣು ಅಸ್ತ್ರಗಳಿಂದ ಮುಕ್ತವಾಗಿರಬೇಕು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2012, 6:05 IST
Last Updated 27 ಮಾರ್ಚ್ 2012, 6:05 IST

ಸೋಲ್ (ಪಿಟಿಐ/ಐಎಎನ್ಎಸ್): ~ಪರಮಾಣು ಶಕ್ತಿಯ ಮೂಲ ವಸ್ತು ಮತ್ತು ತಂತ್ರಜ್ಞಾನ ಪಡೆದುಕೊಳ್ಳಲು ಭಯೋತ್ಪಾದಕರಲ್ಲಿ ತುಡಿತ ಇರುವವರೆಗೆ ಪರಮಾಣು ಭಯೋತ್ಪಾದನೆಯ ಭಯ ತಪ್ಪದು~ ಎಂದಿರುವ ಭಾರತ, ~ಅಂಥದನ್ನು ತಡೆಯಬೇಕಾದರೆ ಜಗತ್ತು ಪರಮಾಣು ಆಧಾರಿತ ಅಸ್ತ್ರಗಳಿಂದ ಮುಕ್ತವಾಗಿರಬೇಕು~ ಎಂದು ಪ್ರತಿಪಾದಿಸಿದೆ.

ಮಂಗಳವಾರ ಇಲ್ಲಿ ಆರಂಭವಾದ ಎರಡನೇ ಪರಮಾಣು ಭದ್ರತಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು, ~ಭಾರತಕ್ಕೆ ಈ ಆತಂಕದ ಅರಿವಿದೆ~ ಎಂದು ಹೇಳಿದ್ದಾರೆ.

ಮುಂದಿನ 2032ರ ಹೊತ್ತಿಗೆ ಅಣು ಶಕ್ತಿಯ ಉತ್ಪಾದನೆಯನ್ನು 63,000 ಮೆಗಾವ್ಯಾಟ್ ಗೆ ಹೆಚ್ಚಿಸಲು ಉದ್ದೇಶಿಸಿರುವ ಭಾರತ, ಜಪಾನಿನಲ್ಲಿ ಸಂಭವಿಸಿದ ಸುನಾಮಿಯಿಂದ ಹಾನಿಗೊಳಗಾದ ಫುಕುಷಿಮಾ ಅಣು ಉತ್ಪಾದನಾ ಘಟದ ದುರಂತದ ಹಿನ್ನೆಲೆಯಲ್ಲಿ, ಅತ್ಯುನ್ನತ ಮಟ್ಟದ ರಕ್ಷಣೆ ಮತ್ತು ಭದ್ರತೆಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಲ್ಲಿ ಪರಮಾಣು ವಿದ್ಯುತ್ ಉತ್ಪಾದನೆಯ ಬಗ್ಗೆ ವಿಶ್ವಾಸ ಮೂಡಿಸುತ್ತಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.