ADVERTISEMENT

ಜಾಫ್ನಾ ಚುನಾವಣೆ: ತಮಿಳು ಒಕ್ಕೂಟಕ್ಕೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 9:26 IST
Last Updated 22 ಸೆಪ್ಟೆಂಬರ್ 2013, 9:26 IST
ಪತ್ರಕೆಗಳಲ್ಲಿ ಚುನಾವಣೆ ಫಲಿತಾಂಶ ಓದುತ್ತಿರುವ ಸಾರ್ವಜನಿಕರು
ಪತ್ರಕೆಗಳಲ್ಲಿ ಚುನಾವಣೆ ಫಲಿತಾಂಶ ಓದುತ್ತಿರುವ ಸಾರ್ವಜನಿಕರು   

ಕೊಲಂಬೊ (ಪಿಟಿಐ):  ಶ್ರೀಲಂಕಾದ ತಮಿಳು ಭಾಷಿಕರ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಜಾಫ್ನಾದಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಟಿಎನ್‌ಎ (ತಮಿಳು ನ್ಯಾಷನಲ್ ಒಕ್ಕೂಟ) ಭರ್ಜರಿ ಗೆಲುವು ದಾಖಲಿಸಿದೆ.

ಅಧ್ಯಕ್ಷ ಮಹೀಂದ ರಾಜಪಕ್ಸೆ ನೇತೃತ್ವದ ಯುಪಿಎಫ್‌ಎ ಮೈತ್ರಿ ಕೂಟ ಭಾರೀ ಮುಖಭಂಗ ಅನುಭವಿಸಿದೆ. 38 ಸ್ಥಾನಗಳಲ್ಲಿ ಟಿಎನ್‌ಎ 30ರಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಯುಪಿಎಫ್‌ಎ ಕೇವಲ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿತು. ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್ ಒಂದು ಸ್ಥಾನ ಪಡೆದು ಕೊಂಡಿದೆ.

ಎಲ್‌ಟಿಟಿಇ ಹಿಡಿತದಲ್ಲಿದ್ದ ಈ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯುಪಿಎಫ್‌ಎ ಭಾರೀ ಪ್ರಯತ್ನ ನಡೆಸಿತ್ತು. ಆದರೆ ತಮಿಳು ನ್ಯಾಷನಲ್ ಒಕ್ಕೂಟವು 30 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಪಿಎಫ್‌ಎ ಗೆ ಭಾರೀ ಆಘಾತವನ್ನುಂಟು ಮಾಡಿದೆ. ಮತ್ತೆ ಟಿಎನ್‌ಎ ಜಾಫ್ನಾದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.