ADVERTISEMENT

ಜೈಶಂಕರ್ ಪಾಕ್ ಭೇಟಿಗೆ ಚೀನಾ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 14:21 IST
Last Updated 5 ಮಾರ್ಚ್ 2015, 14:21 IST
ಜೈಶಂಕರ್ ಪಾಕ್ ಭೇಟಿಗೆ ಚೀನಾ ಸ್ವಾಗತ
ಜೈಶಂಕರ್ ಪಾಕ್ ಭೇಟಿಗೆ ಚೀನಾ ಸ್ವಾಗತ   

ಬೀಜಿಂಗ್ (ಪಿಟಿಐ): ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರ ಇಸ್ಲಾಮಾಬಾದ್ ಭೇಟಿಯನ್ನು ಸ್ವಾಗತಿಸಿರುವ ಚೀನಾ, ಭಾರತ ಹಾಗೂ ಪಾಕಿಸ್ತಾನದ ನಡುವಣ ಬಾಂಧವ್ಯ ಸುಧಾರಿಸುತ್ತಿರುವುದು ಪ್ರಾದೇಶಿಕ ಶಾಂತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಮಹತ್ವದ್ದು ಎಂದು ಗುರುವಾರ ಬಣ್ಣಿಸಿದೆ.

ಅಲ್ಲದೇ, ಶಾಂತಿಯುತ ಮಾತುಕತೆ ಮೂಲಕ ದ್ವಿಪಕ್ಷೀಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಹಾಯ ಹಸ್ತ ಚಾಚುವುದಾಗಿ ಹೇಳಿದೆ.

ಸಂಬಂಧ ಸುಧಾರಿಸುತ್ತಿರುವುದಕ್ಕೆ ಜೈಶಂಕರ್ ಭೇಟಿ ಒಂದು ಸಕಾರಾತ್ಮಕ ಸಂಕೇತ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹ್ಯೂ ಚುನಿಯಿಂಗ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ದಕ್ಷಿಣ ಏಷ್ಯಾದಲ್ಲಿ ಭಾರತ ಹಾಗೂ ಪಾಕಿಸ್ತಾನ ಪ್ರಮುಖ ರಾಷ್ಟ್ರಗಳಾಗಿವೆ. ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆ ಕಂಡು ಬರುತ್ತಿರುವುದು ಸ್ವಾಗತಾರ್ಹ. ಈ ಭಾಗದ ಶಾಂತಿ, ಸ್ಥಿರತೆ ಹಾಗೂ ಅಭಿವೃದ್ಧಿಯ ಈ ಬೆಳವಣಿಗೆ ತುಂಬಾ ಮಹತ್ವದ್ದು ಎಂದು ನಮ್ಮ ನಂಬಿಕೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸಾರ್ಕ್ ಯಾತ್ರೆ’ ಅಂಗವಾಗಿ ಜೈಶಂಕರ್ ಅವರು ಭೂತಾನ್, ಬಾಂಗ್ಲಾದೇಶದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.

ಅಲ್ಲದೇ, ‘ಪರಸ್ಪರ ವಿವಾದಗಳನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸಿಕೊಳ್ಳಲು ಎಂದಿನಂತೆ ಚೀನಾ ಬೆಂಬಲ ನೀಡಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.