ADVERTISEMENT

ತೀಸ್ತಾ ಬಿಕ್ಕಟ್ಟು ಶಮನಕ್ಕೆ ಬಾಂಗ್ಲಾ ಉತ್ಸುಕ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 14:29 IST
Last Updated 14 ಜೂನ್ 2015, 14:29 IST
ತೀಸ್ತಾ ಬಿಕ್ಕಟ್ಟು ಶಮನಕ್ಕೆ ಬಾಂಗ್ಲಾ ಉತ್ಸುಕ
ತೀಸ್ತಾ ಬಿಕ್ಕಟ್ಟು ಶಮನಕ್ಕೆ ಬಾಂಗ್ಲಾ ಉತ್ಸುಕ   

ಢಾಕಾ (ಪಿಟಿಐ): ಪ್ರಧಾನಿ ನರೇಂದ್ರ  ಮೋದಿ ಅವರ ಚೊಚ್ಚಲ ಬಾಂಗ್ಲಾದೇಶ ಭೇಟಿಯ ವೇಳೆ ‌‌ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭೂಗಡಿ ಒಪ್ಪಂದ ಸಾಕಾರಗೊಂಡ ಬೆನ್ನಲ್ಲೆ, ನೆರೆ ರಾಷ್ಟ್ರವು ಇದೀಗ ತೀಸ್ತಾ ನದಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಉತ್ಸುಕತೆ ತೋರಿದೆ.

ಸುದ್ದಿ ಸಂಸ್ಥೆಗೆ ಜತೆಗೆ ಮಾತನಾಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಎಚ್.ಮಹ್ಮೂದ್‌  ಅಲಿ, ‘ಇಲ್ಲಿ ಇತಿಹಾಸ ಸೃಷ್ಟಿಯಾಯಿತು’ ಎಂದು ಮಹತ್ವದ ಭೂಗಡಿ ಒಪ್ಪಂದದವನ್ನು ಉದ್ದೇಶಿಸಿ ನುಡಿದರು.

ಅಲ್ಲದೇ, ತೀಸ್ತಾ ವಿವಾದವೂ ಕೂಡ  ಶೀಘ್ರವೆ ಪರಿಹಾರ ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮಗೆ ತೀಸ್ತಾ ವಿವಾದ ಪರಿಹಾರವಾಗುವ ವಿಶ್ವಾಸವಿದೆ.  ಮೋದಿ ಅವರ ಭೇಟಿಯ ವೇಳೆ ಏರ್ಪಟ್ಟಿರುವ ಸ್ನೇಹಪರತೆ ಹಾಗೂ  ಮೈತ್ರಿಯನ್ನು ನಾವು  ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ನಾವು ಕಾರ್ಯನಿರ್ವಹಿಸಲಿದ್ದೇವೆ’ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.