ADVERTISEMENT

ತೈವಾನ್‌ ಐತಿಹಾಸಿಕ ಮತದಾನ: ಪ್ರಥಮ ಮಹಿಳಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 14:53 IST
Last Updated 16 ಜನವರಿ 2016, 14:53 IST
ಸೈ ಇಂಗ್–ವೆನ್
ಸೈ ಇಂಗ್–ವೆನ್   

ತೈಪೆ(ಎಎಫ್‌ಪಿ): ತೈವಾನ್‌ನಲ್ಲಿ ಆಡಳಿತಾರೂಢ ಪಕ್ಷ ಶನಿವಾರ ಚುನಾವಣೆಯಲ್ಲಿ ಸೋಲೊಪ್ಪಿಕೊಂಡಿದ್ದು, ವಿರೋಧ ಪಕ್ಷ ಡಿಪಿಪಿಯ ಅಭ್ಯರ್ಥಿ ಸೈ ಇಂಗ್–ವೆನ್ ಅವರು ದ್ವೀಪದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

’ನಮ್ಮಿಂದ ತಪ್ಪಾಗಿದೆ ಕ್ಷಮಿಸಿ. ನಾವು ಸಾಕಷ್ಟು ಪರಿಣಾಮಕಾರಿ ಕೆಲಸ ಮಾಡಿಲ್ಲ. ಇದರಿಂದ ಕೆಎಂಟಿ ಸೋಲನುಭವಿಸಬೇಕಾಯಿತು. ಮತದಾರರ ಮೇಲಿನ ನಮ್ಮ ನಿರೀಕ್ಷೆ ವಿಫಲವಾಗಿದೆ’ ಎಂದು ಆಡಳಿತಾರೂಢ ಕೆಎಂಟಿ ಅಭ್ಯರ್ಥಿ ಎರಿಕ್ ಚು ಅವರು ತೈಪೆನಲ್ಲಿನ ಪಕ್ಷದ ಕಚೇರಿಯಲ್ಲಿ ಜನಸಂದಣಿಯನ್ನು ಉದ್ದೇಶಿಸಿ ಹೇಳಿದರು.

ಮತ ಎಣಿಕೆ ಮುಂದುವರೆದಿರುವಾಗಲೇ ಸೈ ಅವರು ಶೇಕಡಾ 60 ಮತಗಳ ಮುನ್ನಡೆ ಪಡೆಯುವ ಮೂಲಕ ಐತಿಹಾಸಿಕ ಜಯಗಳಿಸಿದರು ಎಂದು ವಾಹಿನಿಗಳು ಸುದ್ದಿ ಪ್ರಸಾರ ಮಾಡಿದವು. ಸಾಯ್‌ ಅವರು ಚು ಅವರಿಗಿಂತ ಶೇ 30ರಷ್ಟು ಮತಗಳ ಅಂತರದಲ್ಲಿ ಮುಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT