ADVERTISEMENT

ನ್ಯೂಜಿಲೆಂಡ್‌ ಯುವ ಲೇಖಕಿಗೆ ಒಲಿದ ಬುಕರ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2013, 19:30 IST
Last Updated 16 ಅಕ್ಟೋಬರ್ 2013, 19:30 IST
ನ್ಯೂಜಿಲೆಂಡ್‌ ಯುವ ಲೇಖಕಿಗೆ ಒಲಿದ ಬುಕರ್‌
ನ್ಯೂಜಿಲೆಂಡ್‌ ಯುವ ಲೇಖಕಿಗೆ ಒಲಿದ ಬುಕರ್‌   

ಲಂಡನ್‌ (ಪಿಟಿಐ): ನ್ಯೂಜಿಲೆಂಡ್‌ ಲೇಖಕಿ ಎಲೀನೊರ್‌ ಕಾಟನ್‌ ಅವರಿಗೆ ಪ್ರತಿಷ್ಠಿತ ಬುಕರ್‌ ಪ್ರಶಸ್ತಿ ಲಭಿಸಿದೆ.

ಈ ಸಾರಿಯ ಬುಕರ್‌ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಭಾರತ– ಅಮೆರಿಕ ಮೂಲದ ಝುಂಪಾ ಲಾಹಿರಿ ಸೇರಿದಂತೆ ಐವರು ಲೇಖಕರ ಮಧ್ಯೆ ತೀವ್ರ ಪೈಪೋಟಿ ಇತ್ತು. ಆದರೆ, ಅಂತಿಮವಾಗಿ ಈ ಪ್ರಶಸ್ತಿ 28 ವರ್ಷದ ಕಾಟನ್‌ ಪಾಲಾಯಿತು. ಈ ಮೂಲಕ ಅವರು ಬುಕರ್‌ ಪ್ರಶಸ್ತಿ ಪಡೆದ ಅತಿಕಿರಿಯ ಲೇಖಕಿ ಎಂಬ ಹೆಗ್ಗಳಿ­ಕೆಗೆ ಪಾತ್ರರಾಗಿದ್ದಾರೆ.

ಕಾಟನ್‌ ಬರೆದಿರುವ 832 ಪುಟಗಳ ಬೃಹತ್‌ ಕಾದಂಬರಿ ‘ದಿ ಲುಮಿನರಿಸ್‌’ಗೆ 50 ಸಾವಿರ ಪೌಂಡ್‌ (ಅಂದಾಜು ₨ 49 ಲಕ್ಷ) ಮೊತ್ತದ ಈ ಪ್ರಶಸ್ತಿ ದೊರಕಿದೆ.

ಪ್ರಶಸ್ತಿಯನ್ನು ಲಂಡನ್‌ ಗಿಲ್ಡ್‌­ಹಾಲ್‌­­­ನಲ್ಲಿ ಮಂಗಳವಾರ ರಾತ್ರಿ ನಡೆದ ಸಮಾ­ರಂಭದಲ್ಲಿ ಪ್ರದಾನ ಮಾಡಲಾಯಿತು.

‘ಪ್ರಶಸ್ತಿಯು ನನಗೆ ಮೌಲ್ಯ ಮತ್ತು ಯೋಗ್ಯತೆಯನ್ನು ತಂದುಕೊಟ್ಟಿದೆ’ ಎಂದು ತಮ್ಮ 25ನೇ ವಯಸ್ಸಿನಿಂದಲೇ ಬರವಣಿಗೆ­ಯಲ್ಲಿ ತೊಡಗಿಸಿ­ಕೊಂಡಿ­ರುವ ಕಾಟನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.