ADVERTISEMENT

ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಸೋಲ್‌ (ಪಿಟಿಐ): ಉತ್ತರ ಕೊರಿ ಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ತಮ್ಮ ಸೋದರ ಮಾವ ಜಾಂಗ್‌ ಸೊಂಗ್‌ಥೀಕ್‌ ಅವರನ್ನು ಅಧಿಕಾರದಿಂದ ಕಿತ್ತುಹಾಕಿದ್ದಾರೆ.

ಕಿಮ್‌ ಅವರ ಆಪ್ತ ಸಲಹೆಗಾರ­ರಾಗಿ ಅವರನ್ನು ಅಧಿಕಾರಕ್ಕೆ ತರುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ  ಜಾಂಗ್‌ ಅವರನ್ನು ಭ್ರಷ್ಟಾಚಾರ, ಪಕ್ಷ ವಿರೋಧಿ ಕೆಲಸ­ದಲ್ಲಿ ಭಾಗಿ­ಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.