ADVERTISEMENT

ಪಾಕಿಸ್ತಾನದ 11 ತಾಲಿಬಾನ್‌ ಉಗ್ರರಿಗೆ ಮರಣದಂಡನೆ

ಸ್ಪಷ್ಟನೆ ನೀಡಿದ ಖಮರ್‌ ಜಾವೆದ್‌ ಬಜ್ವಾ

ಏಜೆನ್ಸೀಸ್
Published 5 ಮೇ 2018, 9:07 IST
Last Updated 5 ಮೇ 2018, 9:07 IST
ಖಮರ್‌ ಜಾವೆದ್‌ ಬಜ್ವಾ
ಖಮರ್‌ ಜಾವೆದ್‌ ಬಜ್ವಾ   

ಇಸ್ಲಾಮಾಬಾದ್: ನಾಗರಿಕರು ಮತ್ತು ಭದ್ರತಾಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ 11 ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ಸೇನಾಪಡೆ ಮುಖ್ಯಸ್ಥ ಜನರಲ್‌ ಖಮರ್‌ ಜಾವೆದ್‌ ಬಜ್ವಾ ಅವರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಮರಣದಂಡನೆಗೆ ಒಪ್ಪಿಗೆ ಸೂಚಿಸಿದ್ದಾರೆ.

ರಾಷ್ಟ್ರದ ವಿವಿಧೆಡೆ ದಾಳಿ ನಡೆಸಿದ್ದ ಉಗ್ರರು 36 ನಾಗರಿಕರನ್ನು ಕೊಂದು ಹಾಕಿದ್ದರು. 24 ಸೇನಾಪಡೆಗಳನ್ನು ನಾಶಗೊಳಿಸಿದ್ದರು ಎಂದು ಬಜ್ವಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.