ನ್ಯೂಯಾರ್ಕ್ (ಪಿಟಿಐ): ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಟೈಮ್ ಪತ್ರಿಕೆಯ ‘ವರ್ಷದ ವ್ಯಕ್ತಿ–2013’ಗೌರವಕ್ಕೆ ಪಾತ್ರರಾಗಿದ್ದಾರೆ.
ಪೋಪ್ ಆಗಿ ಅಧಿಕಾರ ವಹಿಸಿಕೊಂಡ ಕೇವಲ 9 ತಿಂಗಳ ಒಳಗಾಗಿಯೇ ಅನೇಕ ಕ್ರಾಂತಿಕಾರಕ ಧಾರ್ಮಿಕ ಬದಲಾವಣೆ ತಂದ ಕಾರಣಕ್ಕಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟೈಮ್ ಪತ್ರಿಕೆ ಹೇಳಿದೆ.
ಪೋಪ್ ಜೊತೆ ಎಡ್ವರ್ಡ್ ಸ್ನೊಡೆನ್ ಹೆಸರು ಕೊನೆಯ ಗಳಿಗೆಯವರೆಗೂ ಸ್ಪರ್ಧೆಯಲ್ಲಿತ್ತು. ಪ್ರಶಸ್ತಿಗಾಗಿ ಸಿದ್ಧಪಡಿಸಿದ ಅಂತಿಮ ಹತ್ತು ಜನರ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೆಸರು ಕೂಡಾ ಇತ್ತು. ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ 42ನೇ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.