ADVERTISEMENT

ಪೋಪ್ ಫ್ರಾನ್ಸಿಸ್ ಕರೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ವ್ಯಾಟಿಕನ್ ಸಿಟಿ (ಎಎಫ್‌ಪಿ): `ಕ್ರೈಸ್ತ ಮತದ ಬೋಧನೆಗನುಗುಣವಾಗಿ ಜೀವನ ನಡೆಸುವಂತೆ ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಜನರಿಗೆ ಕರೆ ನೀಡಿದರು.

ಇಲ್ಲಿನ ಸೇಂಟ್ ಪೀಟರ್ಸ್ ಚೌಕದಲ್ಲಿ ನೆರೆದಿದ್ದ ಸುಮಾರು ಒಂದು ಲಕ್ಷದಷ್ಟು ಜನರನ್ನು ಉದ್ದೇಶಿಸಿ ಮಾತನಾಡಿದರು.

ಮರು ನಾಮಕರಣ: ಉಚಿತ ರಾಕ್ ಸಂಗೀತ ಕಚೇರಿ ಹಾಗೂ ರಾಜಕೀಯ ರ‌್ಯಾಲಿಗಳಿಗೆ ಖ್ಯಾತಿ ಹೊಂದಿದ ಪ್ರಮುಖ ರೋಮ್ ಚೌಕಕ್ಕೆ ಪೋಪ್ ಫ್ರಾನ್ಸಿಸ್ ಅವರು ದಿ. ಪೋಪ್ ಜಾನ್ ಪಾಲ್ ದ್ವಿತೀಯ ಅವರ ಹೆಸರನ್ನು ನಾಮಕರಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.