ಫ್ರಾಂಕ್‌ಫರ್ಟ್ (ಪಿಟಿಐ): ರೆಸಾರ್ಟ್‌ಗಳ ತಾಣ ಮೆಕ್ಸಿಕೊದಲ್ಲಿ ಇದೇ 18 ಮತ್ತು 19ರಂದು ನಡೆಯಲಿರುವ `ಜಿ-20~ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಸಿಂಗ್ ಭಾನುವಾರ ಇಲ್ಲಿಂದ ಲಾಸ್ ಕಾಬೋಸ್‌ಗೆ ತೆರಳಿದರು.
ಮೆಕ್ಸಿಕೊಗೆ ತೆರಳುವ ಮಾರ್ಗಮಧ್ಯೆ ಶನಿವಾರ ಸಂಜೆ ಇಲ್ಲಿಗೆ ಆಗಮಿಸಿದ್ದ ಸಿಂಗ್, `ರಿಯೋ +20~ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ಬ್ರೆಜಿಲ್‌ನ ರಿಯೋ ಡಿ ಜನೈರೊಗೆ ತೆರಳಲಿದ್ದಾರೆ. ಶನಿವಾರ ಭಾರತಕ್ಕೆ ಮರಳುವ ಮುನ್ನ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.