ADVERTISEMENT

‘ಪ್ರಸವ ಪ್ರವಾಸೋದ್ಯಮ’ ಚೀನಾಗೆ ಹೆಚ್ಚಿನ ಲಾಭ

ಅಮೆರಿಕದ ಅಧ್ಯಕ್ಷ ಟ್ರಂಪ್ ‍ಪ್ರತಿಪಾದನೆ

ಪಿಟಿಐ
Published 2 ನವೆಂಬರ್ 2018, 18:29 IST
Last Updated 2 ನವೆಂಬರ್ 2018, 18:29 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌ : ಅಮೆರಿಕದಲ್ಲಿ ಹುಟ್ಟಿದ ಕಾರಣದಿಂದಲೇ ಇಲ್ಲಿನ ಪೌರತ್ವದ ಹಕ್ಕು ದೊರೆಯುವುದು ‘ಪ್ರಸವ ಪ್ರವಾಸೋದ್ಯಮ’ವನ್ನು ಸೃಷ್ಟಿಸಿದೆ ಎಂದು ವ್ಯಂಗ್ಯವಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದಿದ್ದಾರೆ.

ಪ್ರಸವ ಪ್ರವಾಸೋದ್ಯಮದ ಎಂದರೆ, ಮಗು ವಿಗೆ ಜನ್ಮ ನೀಡುವ ಏಕೈಕ ಉದ್ದೇಶ ದಿಂದಲೇ ಜನ ಬೇರೆ ದೇಶಕ್ಕೆ ಪ್ರವಾಸ ಬರುವುದು ಎಂದರ್ಥ. ಆ ಕೆಲಸ ಮುಗಿದ ಬಳಿಕ ಅವರಲ್ಲಿ ಬಹುತೇಕರು ತಾಯ್ನಾಡಿಗೆ ಮರಳುತ್ತಾರೆ ಎಂದು ಕೊಲಂಬಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದರು.

‘ಇದೇ ರೀತಿ ಚೀನಾದಿಂದಲೂ ಹಲವರು ಬರುತ್ತಾರೆ. ನಾವು ದ್ವೇಷಿಸುವ ನಮ್ಮ ಶತ್ರುವಾದ ಚೀನಾ ಎಂಬ ಸರ್ವಾಧಿಕಾರಿಯು, ತನ್ನ ಪತ್ನಿಯಿಂದ ಅಮೆರಿಕದ ನೆಲದಲ್ಲಿ ಮಗು ಹೊಂದುತ್ತಾನೆ. ಶುಭಾಶಯ! ಆತನ ಮಗ ಅಥವಾ ಮಗಳು ಈಗ ಅಮೆರಿಕದ ನಾಗರಿಕರು. ಇಂತಹ ನೀತಿಯಲ್ಲಿ ಏನಾದರೂ ಅರ್ಥವಿದೆಯೇ’ ಎಂದು ಅವರು ಬೆಂಬಲಿಗರನ್ನು ಕೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.