ADVERTISEMENT

ಪ್ಲೂಟೊಗೆ ಮತ್ತೊಬ್ಬ ಚಿಕ್ಕ ಚಂದ್ರಮ!

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ವಾಷಿಂಗ್ಟನ್ (ಪಿಟಿಐ): ಹಿಮಭರಿತ ಕುಬ್ಜ ಗ್ರಹವಾದ ಪ್ಲೂಟೊದ ಐದನೇ ಹಾಗೂ ಅತಿಚಿಕ್ಕ ಗಾತ್ರದ ಚಂದ್ರನನ್ನು ಹಬಲ್ ದೂರದರ್ಶಕದ ನೆರವಿನಿಂದ ಪತ್ತೆಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ದೂರದರ್ಶಕ ಸೆರೆಹಿಡಿದ ಛಾಯಾಚಿತ್ರಗಳಲ್ಲಿ ಕೇವಲ ಬೆಳಕಿನ ಬಿಂದುವಿನಂತೆ ತೋರುವ, ಆಕಾರ ಹೊಂದಿರದ ಈ ಕಿರು ಚಂದ್ರನ ಒಂದು ಬದಿಯಿಂದ ಇನ್ನೊಂದು ಬದಿಗೆ 10ರಿಂದ 25 ಕಿ.ಮೀ. ಅಂತರ ಇರಬಹುದು ಎನ್ನಲಾಗಿದೆ.

ಪ್ಲೂಟೊ ಗ್ರಹ ಅಸ್ತಿತ್ವಕ್ಕೆ ಬಂದ ಹಾಗೂ ಆನಂತರ ಅದು ವಿಕಾಸಗೊಂಡ ಪ್ರಕ್ರಿಯೆಯನ್ನು ಅರಿಯಲು ಇದರಿಂದ ಸಾಧ್ಯವಾಗಬಹುದು ಎಂಬುದು ಸಂಶೋಧಕರ ಆಶಾಭಾವ.ಹಬಲ್ ದೂರದರ್ಶಕದ ವೈಡ್ ಫೀಲ್ಡ್ ಕ್ಯಾಮೆರಾ-3 ಈ ಚಂದ್ರಮನನ್ನು ಸೆರೆ ಹಿಡಿದಿದೆ. ಪ್ಲೂಟೊದಂತಹ ಚಿಕ್ರ ಗ್ರಹವೊಂದು ಸಂಕೀರ್ಣವಾದ ಉಪಗ್ರಹಗಳ ವ್ಯವಸ್ಥೆ ಹೊಂದಿರುವ ಬಗ್ಗೆ ವಿಜ್ಞಾನಿಗಳ ಅಚ್ಚರಿಯನ್ನು ಈ ಆವಿಷ್ಕಾರ ಮತ್ತಷ್ಟು ಹೆಚ್ಚಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.