ADVERTISEMENT

ಫುಕುಶಿಮಾ ಸ್ಥಾವರದಿಂದ ವಿಕಿರಣಪೂರಿತ ನೀರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಟೋಕಿಯೊ (ಕ್ಯೂಡೊ): ಕಳೆದ ವರ್ಷದ ಭೂಕಂಪದ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಫುಕುಶಿಮಾ ಅಣು ಸ್ಥಾವರದ ನಾಲ್ಕನೇ ರಿಯಾಕ್ಟರ್‌ನಿಂದ ವಿಕಿರಣಪೂರಿತ ನೀರು ಸೋರಿಕೆಯಾಗಿದೆ ಎಂದು ಟೋಕಿಯೊ ವಿದ್ಯುತ್ ಶಕ್ತಿ ಕಂಪೆನಿ ತಿಳಿಸಿದೆ.

ಆದರೆ, ಈ ನೀರು ಸ್ಥಾವರದ ಕಟ್ಟಡದ ಹೊರಗೆ ಹರಿದಿಲ್ಲ. ಬಹುಶಃ ಕೊಳವೆ ಮಾರ್ಗ ಒಡೆದಿದ್ದರಿಂದ 6 ಲೀಟರ್‌ನಷ್ಟು ನೀರು ಸ್ಥಾವರದ ಒಳಾಂಗಣದ ನೆಲಕ್ಕೆ ಚೆಲ್ಲಿತು. ಸ್ಥಾವರಗಳನ್ನು ತಂಪಾಗಿಡುವ `ಕೂಲರ್~ಗಳಲ್ಲಿ ಬಳಕೆಯಾಗಿದ್ದರಿಂದ ಈ ನೀರಿನಲ್ಲಿ ವಿಕಿರಣವಸ್ತುಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.