ADVERTISEMENT

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ:ಎಡಪಂಥೀಯ ಹಾಲನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಪ್ಯಾರಿಸ್(ಪಿಟಿಐ/ಐಎಎನ್‌ಎಸ್): ಫ್ರಾನ್ಸ್ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಸೋಷಿಯಲಿಸ್ಟ್ ನಾಯಕ ಫ್ರಾಂಕೋಯಿಸ್ ಹಾಲನ್ ಹಾಲಿ ಅಧ್ಯಕ್ಷ ಕನ್ಸರ್ವೆಟೀವ್ ಪಕ್ಷದ ನಿಕೋಲಸ್ ಸರ್ಕೋಜಿ ಅವರನ್ನು ಪರಾಭವಗೊಳಿಸಿದ್ದಾರೆ.

ಇದರಿಂದಾಗಿ 1995ರ ನಂತರ ಇದೇ ಮೊದಲ ಬಾರಿ ಎಡಪಂಥೀಯ ಪಕ್ಷದ ಅಭ್ಯರ್ಥಿಯೊಬ್ಬರು ಫ್ರಾನ್ಸ್ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. ಈ ಆಯ್ಕೆ ಮುಂಬರುವ ದಿನಗಳಲ್ಲಿ ಯುರೋಪ್ ತನ್ನ ಆರ್ಥಿಕ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದೆ. ಜಗತ್ತಿನ ಇತರ ದೇಶಗಳ ಮೇಲೆ ಪ್ರಭಾವ ಬೀರಲು ಫ್ರಾನ್ಸ್ ತನ್ನ ಸೇನಾ ಸಾಮರ್ಥ್ಯ ಹಾಗೂ ರಾಜತಾಂತ್ರಿಕ ಕೌಶಲ್ಯವನ್ನು ಹೇಗೆ ಬಳಸಿಕೊಳ್ಳಲಿದೆ ಎಂಬುದರ ದಿಕ್ಸೂಚಿಯಾಗಿದೆ.

ಹಾಲನ್ ವಿಜಯದ ಸುದ್ದಿ ಹರಡುತ್ತಿದ್ದಂತೆ ಅವರ ಬೆಂಬಲಿಗರು ಫ್ರೆಂಚ್ ಕ್ರಾಂತಿಗೆ ಸಾಕ್ಷಿಯಾಗಿದ್ದ ಪ್ಯಾರಿಸ್‌ನ ಐತಿಹಾಸಿಕ `ಪ್ಲೇಸ್ ಡಿ ಲಾ ಬಾಸ್ಟಿಲೆ~ ಚೌಕದಲ್ಲಿ ಗುಂಪುಗೂಡಿ ಸಂಭ್ರಮಿಸಿದರು.

ಅಂತಿಮ ಸುತ್ತಿನ ಮತದಾನ ನಡೆದ ಕೆಲವೇ ನಿಮಿಷಗಳಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡ ಸರ್ಕೋಜಿ, ಹಾಲನ್ ಅವರಿಗೆ ಶುಭ ಹಾರೈಸಿದರು. ತಮ್ಮ ಸೋಲಿನ ಹೊಣೆ ಹೊರುವುದಾಗಿಯೂ ಅವರು ಹೇಳಿದರು. ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದೇ ಸರ್ಕೋಜಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. -ಚಿತ್ರ ಪುಟ: 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.