ಇಸ್ತಾಂಬುಲ್ (ಎಪಿ): ನಗರದ ಗೇಜಿ ಉದ್ಯಾನದಲ್ಲಿ ಜಾರಿಗೆ ಬರಲಿರುವ ಅಭಿವೃದ್ಧಿ ಯೋಜನೆಯನ್ನು ವಿರೋಧಿಸಿ ಎರಡು ವಾರಗಳಿಂದ ಉದ್ಯಾನದಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಲ ಪ್ರಯೋಗಿಸಿ ಚದುರಿಸಿದ್ದಾರೆ.
ಇಸ್ತಾಂಬುಲ್ ನಗರದ ತಕ್ಸಿಮ್ ಚೌಕದಲ್ಲಿ ಸಾವಿರಾರು ಚಳವಳಿಗಾರರು ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರ ಆಡಳಿತದ ವಿರುದ್ಧ ಘೋಷಣೆ ಕೂಗುತ್ತಿದ್ದರು.
ರೆಸೆಪ್ ಪ್ರತಿಭಟನೆ ಕೈಬಿಡುವಂತೆ ಎಚ್ಚರಿಕೆ ನೀಡಿದರೂ ಪ್ರತಿಭಟನೆ ಮುಂದುವರಿದಿತ್ತು. ಇದರಿಂದ ತಾಳ್ಮೆ ಕಳೆದುಕೊಂಡ ಪ್ರಧಾನಿ ಪ್ರತಿಭಟನಾಕಾರರನ್ನು ಚದುರಿಸಲು ಆದೇಶ ನೀಡ್ದ್ದಿದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿ , ಜಲಫಿರಂಗಿಗಳನ್ನು ಬಳಸಿ ಬಲವಂತವಾಗಿ ಚದುರಿಸಿದ್ದಾರೆ.
ಪ್ರಧಾನಿ ರೆಸೆಪ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಅಪವಾದ ಅವರ ಮೇಲೆ ಇದೆ. ಇವರ ಅಧಿಕಾರ ಅವಧಿಯ 10 ವರ್ಷಗಳಲ್ಲಿ ಇದು ಅವರ ವಿರುದ್ಧದ ಅತಿ ದೊಡ್ಡ ಪ್ರತಿಭಟನೆ ಎನ್ನಲಾಗಿದೆ.ಗೇಜಿ ಉದ್ಯಾನದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕೆಲಸಗಳನ್ನು ವಿರೋಧಿಸಿ ಪ್ರಾರಂಭವಾದ ಪ್ರತಿಭಟನೆ ಇತರ ನಗರಗಳಿಗೂ ಹಬ್ಬಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.