ಲಂಡನ್ (ಐಎಎನ್‌ಎಸ್): ಬೀಯರ್ ಸೇವಿಸಿದ ಮಹಿಳೆ ಅಥವಾ ಪುರುಷರಲ್ಲಿ ಶೇ 60ರಷ್ಟು ಜನರು ಇತರರೊಂದಿಗೆ ಬೇಗೆ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಾರೆ ಎಂಬ ಹೊಸ ಅಂಶ ಹೊರ ಬಿದ್ದಿದೆ.
ಹಾರ್ವರ್ಡ್ ಪದವೀಧರ ಕ್ರಿಸ್ಟೇನ್ ರುದರ್ ಅವರು `ಒಕೆ ಮನ್ಮಥ~ ಎಂಬ ವೆಬ್‌ಸೈಟ್ ಮೂಲಕ ಲೈಂಗಿಕ ಸಂಪರ್ಕ ಹೊಂದಿದ ಮತ್ತು ಹೊಂದದೇ ಇರುವ ಜನರನ್ನು ಗಣನೆಗೆ ತೆಗೆದುಕೊಂಡು ಸಂಗ್ರಹಿಸಿದ ದತ್ತಾಂಶಗಳಿಂದ ಇದು ಗೊತ್ತಾಗಿದೆ.
ಈ ವೆಬ್‌ಸೈಟ್ ಮೂಲಕ ಲಕ್ಷಾಂತರ ಜನರ ಸ್ವಭಾವ ಮತ್ತು ಅವರೊಂದಿಗಿನ ಸಂವಾದದ ಬಳಿಕ ಈ ವಿಶ್ಲೇಷಣೆ ಮಾಡಿರುವ ರುದರ್, ಬೀಯರ್ ಸೇವಿಸುವ ಜನರು ಆಕಸ್ಮಿಕ ಲೈಂಗಿಕತೆ ಹೊಂದುತ್ತಾರೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.