ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ರಫ್ತು ಮಾಡುತ್ತಿರುವ ಕಲ್ಲಿದ್ದಲಿನ ಪ್ರಮಾಣವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಚಿಂತನೆ ನಡೆಸಿದೆ ಎಂದು ಆಸ್ಟ್ರೇಲಿಯಾ ರಿಸರ್ವ್ ಬ್ಯಾಂಕ್ ಆರ್ಥಿಕ ಸಮಿತಿಯ ಸಂಶೋಧನೆಯು ಹೇಳಿದೆ.
ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಜಗತ್ತಿನ 3ನೇ ಅತಿದೊಡ್ಡ ರಾಷ್ಟ್ರ ಹಾಗೂ ಆಸ್ಟ್ರೇಲಿಯಾದಿಂದ ಅತಿ ಹೆಚ್ಚು ಕಲ್ಲಿದ್ದಲು ರಫ್ತು ಆಗುವ ಎರಡನೇ ದೇಶ ಭಾರತವಾಗಿದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರಿನ ಸಂಗ್ರಹವಿದೆ.
ಉಕ್ಕು ಉತ್ಪಾದಕರು ಅಗತ್ಯವಾದಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಆಸ್ಟ್ರೇಲಿಯಾದ ಪಾಲು ಅತಿಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.