ADVERTISEMENT

ಭಾರತದಿಂದ ನಿರಾಧಾರ ಭಯೋತ್ಪಾದನೆ ಆರೋಪ: ಪಾಕ್ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 13:01 IST
Last Updated 28 ಜನವರಿ 2016, 13:01 IST
ಪಾಕ್ ವಿದೇಶಾಂಗ ಇಲಾಖೆಯ ವಕ್ತಾರ ಖಾಜಿ ಖಲಿಲುಲ್ಲಾಹ್
ಪಾಕ್ ವಿದೇಶಾಂಗ ಇಲಾಖೆಯ ವಕ್ತಾರ ಖಾಜಿ ಖಲಿಲುಲ್ಲಾಹ್   

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ವಿರುದ್ಧ ಭಾರತವು ‘ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ’ಗಳನ್ನು ಮಾಡುತ್ತದೆ ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.

ಇದರಿಂದ ‘ಜತೆಗೂಡಿ’ ಉಗ್ರವಾದವನ್ನು ತೊಡೆದು ಹಾಕುವ ಯತ್ನಗ‌ಳು ದುರ್ಬಲಗೊಳ್ಳುತ್ತವೆ ಎಂದೂ ‌ದೂರಿದೆ.

ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದೇಶಾಂಗ ಇಲಾಖೆಯ ವಕ್ತಾರ ಖಾಜಿ ಖಲಿಲುಲ್ಲಾಹ್, ‘ಭಯೋತ್ಪಾದನೆಯು ಬರಿ ಭಾರತಕ್ಕೆ ಮಾತ್ರವಲ್ಲ, ಪಾಕಿಸ್ತಾನಕ್ಕೂ ಒಂದು ಸಮಸ್ಯೆ. ಜಗತ್ತಿಗೂ ಇದೊಂದು ಸಂದಿಗ್ಧ’ ಎಂದರು.

ADVERTISEMENT

ಉಗ್ರರ ದಾಳಿ ನಡೆದಾಗೆಲ್ಲವೂ ಪಾಕಿಸ್ತಾನವನ್ನು ಟೀಕಿಸಲಾಗುತ್ತದೆಯಲ್ಲ ಎಂಬ ಪ್ರಶ್ನೆ ಅವರು ಉತ್ತರಿಸಿದರು.

ಪಾಕಿಸ್ತಾನದ ವಿರುದ್ಧ ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ ಮಾಡುವುದನ್ನು ಭಾರತ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ, ಇಂಡೋ–ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ದಿನಾಂಕ ನಿಗದಿ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ನಿಕಟ ಸಂಪರ್ಕದಲ್ಲಿವೆ ಎಂದರು. ಆದರೆ, ಮಾತುಕತೆಯ ಕಾಲಮಿತಿ ಸ್ಪಷ್ಟಪಡಿಸಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.