ADVERTISEMENT

ಭಾರತೀಯ ಮೂಲದ ವಿದ್ಯಾರ್ಥಿ ಕೊಲೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಲಂಡನ್ (ಐಎಎನ್‌ಎಸ್): ಭಾರತೀಯ ಮೂಲದ  ಸಿಖ್ ವಿದ್ಯಾರ್ಥಿಯೊಬ್ಬನ ಕೊಲೆಗೆ ಕಾರಣರಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅಪರಾಧ ಮಾಡಿರುವುದಾಗಿ ಇಲ್ಲಿನ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾಳೆ.  

 ಗಗನ್‌ದೀಪ್ ಸಿಂಗ್ ಕೊಲೆಯಾದ ವ್ಯಕ್ತಿ. ಈತ ಮುಂದಿಲ್ ಮಹಿಲ್ ಎಂಬ ವಿದ್ಯಾರ್ಥಿನಿಯನ್ನು ಇಷ್ಟಪಡುತ್ತಿದ್ದ. ಆಕೆ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೂ  ಪ್ರೀತಿಸುವಂತೆ ಸಿಂಗ್ ಪದೇ ಪದೇ ಒತ್ತಾಯಿಸುತ್ತಿದ್ದ.

ಇದರಿಂದ ಬೇಸತ್ತ ಮಹಿಲ್, ತನ್ನ ಸ್ನೇಹಿತರೊಂದಿಗೆ ಸೇರಿ ಸಿಂಗ್ ಮೇಲೆ ಹಲ್ಲೆ ನಡೆಸಿದರು. ಆತ ಪ್ರಜ್ಞಾಹೀನನಾಗಿದ್ದಾಗ, ಆತನನ್ನು ಕಾರಿನೊಳಗೆ ಕೂರಿಸಿ, ಅದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು.

ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ, ಕೊಲೆ ಆರೋಪಿ ಮುಂದಿಲ್ ಮಹಿಲ್ ಹಾಗೂ ಕೊಲೆಗೆ ನೆರವಾದ ಆಕೆಯ ಇಬ್ಬರು ಸ್ನೇಹಿತರನ್ನು ಅಪರಾಧಿ ಎಂದು ಪರಿಗಣಿಸಿ, ಸುದೀರ್ಘ ಜೈಲುವಾಸದ ಶಿಕ್ಷೆ ನೀಡಲು ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.