ADVERTISEMENT

ಭೂಕಂಪ ಪೀಡಿತ ಟರ್ಕಿ: ಅಣುಸ್ಥಾವರ ಸ್ಥಾಪನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

 ಬುಯುಕೆಸಿಲಿ (ಟರ್ಕಿ) (ಎಎಫ್‌ಪಿ):  ಜಪಾನ್‌ನಲ್ಲಿ ಸಂಭವಿಸಿರುವ ಅಣು ಸ್ಥಾವರ ದುರಂತದಿಂದ ಇಡೀ ಜಗತ್ತೇ ಬೆಚ್ಚಿ ಬಿದ್ದಿರುವಂತೆಯೇ, ಭೂಕಂಪ ಪೀಡಿತ ದೇಶವಾದ ಟರ್ಕಿಯಲ್ಲಿ ಅಣು ವಿದ್ಯುತ್ ಸ್ಥಾವರ ತಲೆಎತ್ತುವ ಲಕ್ಷಣ ಕಂಡುಬಂದಿದೆ.

ಮೆಡಿಟರೇನಿಯನ್ ಸಮುದ್ರದ ಸಮೀಪದ ಟರ್ಕಿಯ ದಕ್ಷಿಣದ ಮೆರ್ಸಿನ್ ಪ್ರಾಂತ್ಯದ ಅಕ್ಕುಯು ಕೊಳ್ಳದ ಸಮೀಪ ಈ ಅಣು ಸ್ಥಾವರ ಸ್ಥಾಪಿಸಲು ಟರ್ಕಿ ಸರ್ಕಾರ ನಾಲ್ಕು ದಶಕಗಳಿಂದಲೂ ಪ್ರಯತ್ನಿಸುತ್ತಲೇ ಬಂದಿದೆ.

ಆದರೆ ನೆರೆಯ ರಾಷ್ಟ್ರಗಳು ಮತ್ತು ಪರಸರವಾದಿಗಳ ವಿರೋಧ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.  ‘ಭೂಕಂಪದ ಕಾರಣಕ್ಕೆ ಈ ಯೋಜನೆಯನ್ನು ಕೈಬಿಡಲಾಗದು’ ಟರ್ಕಿ ಪ್ರಧಾನಿ ರೆಸಿಪ್ ತಯ್ಯಿಪ್ ಎರ್ಡೋಗನ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.