ADVERTISEMENT

ಭೂತಾನ್: ರಾಜದಂಪತಿ ಆರತಕ್ಷತೆ : ರಾಹುಲ್ ಗಾಂಧಿ ಏಕೈಕ ಅತಿಥಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST
ಭೂತಾನ್: ರಾಜದಂಪತಿ ಆರತಕ್ಷತೆ : ರಾಹುಲ್ ಗಾಂಧಿ ಏಕೈಕ ಅತಿಥಿ
ಭೂತಾನ್: ರಾಜದಂಪತಿ ಆರತಕ್ಷತೆ : ರಾಹುಲ್ ಗಾಂಧಿ ಏಕೈಕ ಅತಿಥಿ   

ಥಿಂಪು (ಪಿಟಿಐ): ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಜದಂಪತಿ ಶನಿವಾರ ಆಯೋಜಿಸಿದ್ದ ಆರತಕ್ಷತೆ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭಾಗವಹಿಸಿ ಗಮನ ಸೆಳೆದರು.

ಪುಟ್ಟ ರಾಷ್ಟ್ರವಾದ ಭೂತಾನ್ ಹಾಗೂ ನೆಹರೂ-ಗಾಂಧಿ ಕುಟುಂಬದ ನಡುವಿನ ಸಂಬಂಧವನ್ನು ಇದು ತೋರಿಸುತ್ತದೆ ಎಂದು ಬಣ್ಣಿಸಲಾಗಿದೆ.

ಆರತಕ್ಷತೆಯಲ್ಲಿ ಭಾಗವಹಿಸಲು  ಶುಕ್ರವಾರ ಥಿಂಪುವಿಗೆ ಆಗಮಿಸಿದ್ದ ರಾಹುಲ್ ರಾಜ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಬೆರೆತರು.

ದೊರೆ ಜಿಗ್ಮೆ ಕೇಸರ್ ನಾಗ್‌ಯೇಲ್ ವಾಂಗ್‌ಚುಕ್ ತಮ್ಮ ಬಾಲ್ಯ ಗೆಳತಿ ಜೇತ್ಸುನ್ ಪೆಮಾ ಅವರನ್ನು ಇತ್ತೀಚೆಗೆಷ್ಟೇ ವರಿಸಿದ್ದರು. ಈ ವಿವಾಹದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಆಚರಣೆಯಲ್ಲಿ ಭಾಗವಹಿಸಲು  ರಾಜ ಕುಟುಂಬ ರಾಹುಲ್ ಗಾಂಧಿ ಅವರನ್ನು ಆಮಂತ್ರಿಸಿತ್ತು. ಈ ಸಮಾರಂಭವು ಭೂತಾನ್ ರಾಜ ಕುಟುಂಬ ಮತ್ತು ಸರ್ಕಾರಿ ಕಾರ್ಯಕ್ರಮವಾಗಿತ್ತು.

ವಾಂಗ್‌ಚುಕ್ ಅವರ ಆತ್ಮೀಯ ಸ್ನೇಹಿತರಾಗಿರುವ ರಾಹುಲ್ ಗಾಂಧಿ ಅವರು ಒಬ್ಬರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಾಸಗಿ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ದಂಪತಿ ಭೂತಾನಿನ ರಾಜ ಸೇನೆಯ ಗೌರವ ರಕ್ಷೆ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.