ADVERTISEMENT

ಭೂಮಿ ಸುತ್ತ ಕಪ್ಪುತಟ್ಟೆ

ಊಹೆಗಿಂತ ಭೂಮಂಡಲ ಹೆಚ್ಚು ಭಾರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಲಂಡನ್‌ (ಪಿಟಿಐ): ಭೂಮಿಯ ಸಮ­ಭಾಜಕ ವೃತ್ತದ ಸುತ್ತಲೂ ತಟ್ಟೆಯಾ­ಕಾ­ರದ ಕಪ್ಪುದ್ರವ್ಯ ಆವರಿಸಿದೆ ಎಂಬ ಕುತೂ­­ಹ­ಲ­ಕಾರಿ ಅಂಶವನ್ನು ಜಿಪಿಎಸ್‌ ಉಪಗ್ರಹಗಳ ನೆರವಿನಿಂದ ಪತ್ತೆ ಹಚ್ಚಲಾಗಿದೆ.

ಭೂಮಧ್ಯ ರೇಖೆಗುಂಟ ಅಂಟಿಕೊಂ­ಡಂ­ತಿ­­ರುವ ಕಪ್ಪನೆಯ ವಸ್ತು ಏನು ಎಂಬುದು ವಿಜ್ಞಾನಿ­ಗಳಿಗೆ ಇನ್ನೂ ನಿಗೂಢವಾಗಿಯೇ ಉಳಿ­ದಿದೆ. ಈ ಕಪ್ಪು ತಟ್ಟೆಯಿಂದಾ­ಗಿಯೇ ಭೂಮಿ ತೂಕ ಈ ಮೊದಲು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಎಂಬ ಮತ್ತೊಂದು ಅಂಶವನ್ನೂ ಈ ಸಂಶೋಧನೆ ಬಹಿರಂಗಪಡಿಸಿದೆ.

ಜಿಪಿಎಸ್‌ ಉಪಗ್ರಹಗಳು ಕಳುಹಿ­ಸಿದ ದತ್ತಾಂಶಗಳ ನೆರವಿನಿಂದ ಟೆಕ್ಸಾಸ್‌ ವಿಶ್ವ­ವಿದ್ಯಾಲಯದ ಬೆನ್‌ ಹ್ಯಾರಿಸ್‌ ಈ ಕುತೂಹಲಕಾರಿ ಅಂಶ­ಗಳನ್ನು ಪತ್ತೆ ಹಚ್ಚಿದ್ದಾರೆ. ಸೌರವ್ಯೂಹ­ದಲ್ಲಿ­ರುವ ಶೇ 80ರಷ್ಟು ಕಪ್ಪುವಸ್ತು ಭೂಮಿಯ ಸುತ್ತ ಹರಡಿದೆ. ಇದರಿಂ­ದಾ­ಗಿಯೇ ಭೂಮಿಯ ತೂಕ ನಮ್ಮ ಗ್ರಹಿಕೆಗಿಂತಲೂ ಅನೇಕ ಪಟ್ಟು ಹೆಚ್ಚು (0.005ದಿಂದ 0.008 ಪಟ್ಟು) ಎನ್ನುವ ವಿಷಯವನ್ನು ಹ್ಯಾರಿಸ್‌ ಪತ್ತೆ ಹಚ್ಚಿದ್ದಾರೆ.

ಭೂಮಿಯ ಸುತ್ತಲೂ ಇರುವ ಕಪ್ಪು ವಸ್ತುವಿನ ತಟ್ಟೆ ಆಕೃತಿ 191 ಕಿ. ಮೀ ದಪ್ಪ ಮತ್ತು 70,000 ಕಿ.ಮೀ ವ್ಯಾಪ್ತಿಯಲ್ಲಿ ಹರಡಿದೆ ಎಂಬುವುದು ಅವರ ವಾದ.

ಡಿಸೆಂಬರ್‌ನಲ್ಲಿ ಸ್ಯಾನ್‌ ಫ್ರಾನ್ಸಿಸ್ಕೋ­ದಲ್ಲಿ ನಡೆದ ಅಮೆರಿಕದ ಖಭೌತ­ವಿಜ್ಞಾನ ಒಕ್ಕೂಟದ ಸಭೆಯಲ್ಲಿ ಅವರು ವರದಿಯನ್ನು ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.