ADVERTISEMENT

ಮಂಗಳನಲ್ಲಿ ಹೊಳೆಯುವ ವಸ್ತು!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಲಾಸ್‌ಏಂಜಲೀಸ್ (ಎಎಫ್‌ಪಿ): ನಾಸಾದ `ಕ್ಯೂರಿಯಾಸಿಟಿ~ ರೋವರ್ ಮಂಗಳನ ಅಂಗಳದಲ್ಲಿ ಹೊಳೆಯುವ ಬಣ್ಣದ ವಸ್ತುವನ್ನು ಪತ್ತೆ ಮಾಡಿದೆ. ಇದು ಮಾನವ ನಿರ್ಮಿತವಾಗ್ದ್ದಿದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳನಲ್ಲಿ ರೋವರ್ ಮಣ್ಣನ್ನು ಅಗೆದ ಸ್ಥಳದ ಛಾಯಾಚಿತ್ರದಲ್ಲಿ ಹೊಳೆಯುವ ವಸ್ತು ಕಂಡುಬಂದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ತಜ್ಞರು ಇದು ಮಾನವ ನಿರ್ಮಿತ ವಸ್ತುವಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಲ್ಲಿ ಇಂತಹುದೇ ವಸ್ತು ಪತ್ತೆಯಾಗಿತ್ತು. ಅದು ರೋವರ್‌ಗೆ ಸೇರಿದ ಪ್ಲಾಸ್ಟಿಕ್ ವಸ್ತು ಇರಬಹುದು ಎಂದು ಅಂದಾಜಿಸಲಾಗಿತ್ತು.

`ಮಂಗಳದ ಮೇಲ್ಮೈ ಮೇಲೆ ಕಾಣಿಸಿಕೊಂಡಿರುವ ಹೊಳೆಯುವ ವಸ್ತುವನ್ನು ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಇದು ಮಂಗಳ ಗ್ರಹಕ್ಕೆ ಸೇರಿದ್ದು ಎಂದು ಒಮ್ಮತಕ್ಕೆ ಬರಲಾಗಿದೆ~ ಎಂದು `ಕ್ಯೂರಿಯಾಸಿಟಿ~ ಯೋಜನೆಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.