ಲಂಡನ್(ಪಿಟಿಐ): ನಿಮಗೆ ಚಹಾ ಕುಡಿಯುವ ಚಟ ಇದೆಯೇ? ಹಾಗಿದ್ದಲ್ಲಿ ಹೊಸ ಅಧ್ಯಯನ ವೊಂದು ನಿಮ್ಮ ಮುಖದಲ್ಲಿ ನಗು ಅರಳಿಸಬಲ್ಲದು.ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಚಹಾ ಸೇವಿಸಿದಲ್ಲಿ ಟೈಪ್-2 ಮಧುಮೇಹವನ್ನು ದೂರವಿಡಬಹುದು ಎನ್ನುತ್ತಾರೆ ಜರ್ಮನಿಯ ಹೆನ್ರಿಚ್ ಹೇನ್ ವಿಶ್ವವಿದ್ಯಾಲಯದ ತಜ್ಞರು.
ಬೊಜ್ಜು ಶೇಖರಣೆ ಸಕ್ಕರೆ ಕಾಯಿಲೆಗೆ ಮುಖ್ಯ ಕಾರಣ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಆಹಾರ ಪದ್ಧತಿಯೂ ಇದಕ್ಕೆ ಕಾರಣವಾಗುತ್ತದೆ. ಚಹಾ ಜೀರ್ಣಕ್ರಿಯೆ ಹೆಚ್ಚಿಸುವುದರಿಂದ ದಿನಕ್ಕೆ ನಾಲ್ಕು ಕಪ್ ಚಹಾ ಸೇವಿಸಿದಲ್ಲಿ ಅದು ಟೈಪ್-2 ಮಧುಮೇಹವನ್ನು ದೂರ ಇಡಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.