ADVERTISEMENT

ಮಾಂಸಾಹಾರ: ಯುವತಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಲಂಡನ್ (ಐಎಎನ್‌ಎಸ್):  ಕಳೆದ 15 ವರ್ಷಗಳಿಂದ ಬೇರೆ ಯಾವುದೇ ಆಹಾರ ಸೇವಿಸದೇ ಕೋಳಿ ಮಾಂಸ ಸೇವಿಸಿದ ಇಂಗ್ಲೆಂಡ್‌ನ 17 ವರ್ಷದ ಯುವತಿಯೊಬ್ಬಳು ಅಶಕ್ತಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಬರ್ಮಿಂಗ್‌ಹ್ಯಾಮ್‌ನ ಸ್ಟೆಸೆ ಇರ‌್ವಿನ್ ಎಂಬಾಕೆ  ಎರಡನೇ ವರ್ಷದಿಂದ ಸತತ 15 ವರ್ಷಗಳವರೆಗೂ ಕೇವಲ ಕೋಳಿ ಮಾಂಸ ಸೇವಿಸಿ ಈಗ ಹಾಸಿಗೆ ಹಿಡಿದಿದ್ದಾಳೆ ಎಂದು `ಸನ್~ ವರದಿ ಮಾಡಿದೆ.

ಒಂದು ಬಾರಿಯೂ ಆಕೆ ತರಕಾರಿ ಅಥವಾ ಹಣ್ಣುಗಳನ್ನು ಸೇವಿಸಿಲ್ಲ. ಇದರಿಂದ ರಕ್ತಹೀನತೆಯಿಂದ ಬಳಲುತ್ತಿದ್ದು, ಗಂಟಲಿನ ರಕ್ತನಾಳಗಳಲ್ಲಿ ಊತ ಕಂಡು ಬಂದಿದೆ. ಈಗ ಅವಳಿಗೆ ವಿಟಮಿನ್‌ಗಳ ತುರ್ತು ಅಗತ್ಯವಿದೆ ಎಂದಿದ್ದಾರೆ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.