ADVERTISEMENT

ಮಾನವ ಹಕ್ಕು ಕಾರ್ಯಕರ್ತ ನಿಧನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಟೊರಾಂಟೊ (ಪಿಟಿಐ): ಬಹುಕಾಲದಿಂದ ಅನಾರೋಗ್ಯದಲ್ಲಿದ್ದ ಭಾರತ-ಕೆನಡಾ ಮಾನವ ಹಕ್ಕುಗಳ ಪ್ರಸಿದ್ಧ ಕಾರ್ಯಕರ್ತ ಡಾ. ಬಾವುಸಾಹೇಬ್ ಉಬಾಳೆ (76) ಗುರುವಾರ ಭಾರತದ ಪುಣೆ ನಗರದಲ್ಲಿ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಮಾನವ ಹಕ್ಕುಗಳ ಮಾಜಿ ಜನಾಂಗೀಯ ಆಯುಕ್ತರಾಗಿದ್ದ ಉಬಾಳೆ `ದಿ ಆರ್ಡರ್ ಆಫ್ ಒಂಟಾರಿಯೊ~ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕೆನಡಾ ಭಾರತೀಯ ಸಮುದಾಯ ಸಂತಾಪ ಸೂಚಿಸಿದೆ.
 
ಉಬಾಳೆ ಎಲ್ಲ ಸಮುದಾಯಗಳಲ್ಲಿ ಸೌಹಾರ್ದ ಮೂಡಿಸಿದ್ದರು ಎಂದು ಇಲ್ಲಿನ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎಲ್.ಎಂ. ಸಬರವಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.