ಬೀಜಿಂಗ್ (ಪಿಟಿಐ): ದೇಶದ ಪ್ರಪ್ರಥಮ ಮಹಿಳಾ ಗಗನಯಾತ್ರಿಯನ್ನು ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸಲು ಚೀನಾ ಸಕಲ ಸಿದ್ಧತೆ ನಡೆಸಿದೆ.
‘ಮುಂದಿನ ದಶಕದಲ್ಲಿ ಚಂದ್ರನ ಮೇಲೆ ರೋವರ್ ಶೋಧ ಯಂತ್ರವನ್ನು ಇಳಿಸುವ ಹಾಗೂ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ತಾಂತ್ರಿಕತೆಯಿಂದ ರೂಪುಗೊಂಡಿರುವ ಬಾಹ್ಯಾಕಾಶ ನೌಕೆಯ ಜೊತೆ ಮಹಿಳೆಯೊಬ್ಬರನ್ನು ಅಂತರಿಕ್ಷಕ್ಕೆ ಕಳುಹಿಸಲಾಗುವುದು’ ಎಂದು ಬಾಹ್ಯಾಕಾಶ ತಂತ್ರಜ್ಞ ಕಚೇರಿಯ ಅಧಿಕಾರಿ ಯಾಂಗ್ ಲಿವಿ ತಿಳಿಸಿರುವುದಾಗಿ ‘ಚೀನಾ ಡೈಲಿ’ ವರದಿ ಮಾಡಿದೆ.
2013ರಲ್ಲಿ ಚೀನಾ ಚಂದ್ರನ ಮೇಲೆ ರೋವರ್ ಯಂತ್ರವನ್ನು ಇಳಿಸುವ ಸಿದ್ಧತೆಯಲ್ಲಿದೆ. ಅಂತೆಯೇ ಜರ್ಮನಿ ಜೊತೆಗೂಡಿ ಬಾಹ್ಯಾಕಾಶದಲ್ಲಿ ಜೈವಿಕ ಕೃಷಿ ಪ್ರಯೋಗ ನಡೆಸಲು ಕೂಡಾ ಸಜ್ಜಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಫ್ರಾನ್ಸ್ ಜೊತೆಗೂ ಸಹಾ ಚೀನಾ ಶ್ರಮಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.