ADVERTISEMENT

ಮೂವರು ಭಾರತೀಯ ಸಹೋದರರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಐಎಎನ್‌ಎಸ್): ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಗೆ ಶ್ರಮಿಸಿದ ಮೂವರು ಭಾರತೀಯ ಸಹೋದರರು ಪ್ರತಿಷ್ಠಿತ `ವೈಟಲ್ ವಾಯ್ಸಸ್ ಗ್ಲೋಬಲ್ ಲೀಡರ್‌ಷಿಪ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಂಗಳವಾರ ಕೆನಡಿ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜಾಯ್ ಬಿಡೆನ್ ಅವರು ರವಿ, ರಿಷಿ ಮತ್ತು ನಿಶಿಕಾಂತ್ ಅವ ರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

`ಮಹಿಳಾ ಸಂಘಟನೆಗಳ ನೇತೃತ್ವವನ್ನು ಪುರುಷರು ವಹಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಆದರೆ, ನಾವು ನಿರಂತರವಾಗಿ ಕಾರ್ಯನಿರ್ವಹಿಸಿದೆವು. ಅಂತಿಮವಾಗಿ ಮಹಿಳಾ ಕಾರ್ಯಕರ್ತರು ನಮ್ಮ ಕೆಲಸಕ್ಕೆ ಕೈಜೋಡಿಸಿದರು' ಎಂದು ಭಾರತದ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ 45 ವರ್ಷದ ರವಿಕಾಂತ್ ತಿಳಿಸಿದರು.

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು 1997ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದರು. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಈ ಮೂವರು ಸಹೋದರರು 2001ರಲ್ಲಿ `ಶಕ್ತಿವಾಹಿನಿ' ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ಶಕ್ತಿವಾಹಿನಿ ಇಲ್ಲಿಯವರೆಗೆ 2,000 ಜನರನ್ನು ರಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.