ADVERTISEMENT

ಮೇನಲ್ಲಿ ದಾಖಲೆಯ ತಾಪಮಾನ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಮೇ ತಿಂಗಳಲ್ಲಿ ದಾಖಲಾದ ಉಷ್ಣಾಂಶ ಕಳೆದೊಂದು ಶತಮಾನದಲ್ಲಿನ ದಾಖಲೆಯ ಎರಡನೇ ಅತ್ಯಧಿಕ ತಾಪಮಾನ ಎನ್ನಲಾಗಿದೆ. 
   
20ನೇ ಶತಮಾನದ ಸರಾಸರಿ ತಾಪಮಾನ 14.8 ಡಿಗ್ರಿ ಸೆಲ್ಸಿಯಸ್‌ಗಿಂತ ಕಳೆದ ಮೇನಲ್ಲಿ ದಾಖಲಾದ ಸರಾಸರಿ ಜಾಗತಿಕ ತಾಪಮಾನ 0.66 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ.  

ಯುರೋಪ್, ಏಷ್ಯಾ, ಉತ್ತರ ಆಫ್ರಿಕಾ ಮತ್ತು ಬಹುತೇಕ ಉತ್ತರ ಅಮೆರಿಕದ ಭಾಗ ಮತ್ತು ದಕ್ಷಿಣ ಗ್ರೀನ್‌ಲೆಂಡ್‌ಗಳಲ್ಲಿ ಮೇನಲ್ಲಿ ಹಿಂದೆಂದಿಂಗಿಂತಲೂ ಅಧಿಕ ತಾಪಮಾನ ದಾಖಲಾಗಿದೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ಪರಿಸರ ನಿರ್ವಹಣಾ ಸಂಸ್ಥೆಯ ಅಂಕಿ-ಅಂಶಗಳು ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ. 

ಕ್ರಿ.ಶ.1880ರಿಂದ ಈಚೆಗೆ ದಾಖಲಾದ ಅತ್ಯಧಿಕ ತಾಪಮಾನ ಮೇ ನಲ್ಲಿ ದಾಖಲಾದರೆ, 1907ರಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ (-0.49 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ.

ಅದೇ ರೀತಿ ಆಸ್ಟ್ರೇಲಿಯಾ, ಅಲಾಸ್ಕಾ ಮತ್ತು ಅಮೆರಿಕ-ಕೆನಡಾದ ಪಶ್ಚಿಮ ಭಾಗಗಳಲ್ಲಿ ಸರಾಸರಿ ತಾಪಮಾನಕ್ಕಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.