ADVERTISEMENT

ಮೌಸ್ ಜನಕ ಡಗ್ಲಾಸ್ ನಿಧನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:36 IST
Last Updated 4 ಜುಲೈ 2013, 19:36 IST

ಲಾಸ್‌ಏಂಜಲೀಸ್ (ಪಿಟಿಐ): ಕಂಪ್ಯೂಟರ್  ಮೌಸ್ ಜನಕ ಡಗ್ಲಾಸ್ ಎಂಗಲ್‌ಬರ್ಟ್ (88) ಮೂತ್ರಪಿಂಡ  ವೈಫಲ್ಯದಿಂದ ನಿಧನರಾಗಿದ್ದಾರೆ.

ಇಂಟರ್‌ನೆಟ್ ಹಾಗೂ ಇ-ಮೇಲ್ ಬಗ್ಗೆ ದಶಕಗಳಿಗೂಮೊದಲೇ ವ್ಯಾಪಕ ದೃಷ್ಟಿಕೋನ ಹೊಂದಿದ್ದ ಡಗ್ಲಾಸ್, ಕ್ಯಾಲಿಫೋರ್ನಿಯಾದ  ನಿವಾಸದಲ್ಲಿ ಮೃತಪಟ್ಟಿದ್ದಾರೆ.

1925ರ ಜನವರಿ 30ರಂದು  ಜನಿಸಿದ ಡಗ್ಲಾಸ್, 1963ರಲ್ಲಿ ಸ್ಟ್ಯಾನ್‌ಫೋರ್ಡ್ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ (ಪ್ರಸ್ತುತ ಅಂತರರಾಷ್ಟ್ರೀಯ ಎಸ್‌ಆರ್‌ಐ)  ಮೌಸ್ ಕಂಡುಹಿಡಿದಿದ್ದರು. ಇದಕ್ಕಾಗಿ ವಿಶ್ವ ವಿಖ್ಯಾತಿ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.