ADVERTISEMENT

ರಜೆಯ ಮಜಾಕ್ಕೆ 90 ಲಕ್ಷ ಗಂಟೆ ಕೆಲಸದ ಅವಧಿ ನಷ್ಟ!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಲಂಡನ್, (ಪಿಟಿಐ): ಪ್ರತೀ ವರ್ಷ ಇಲ್ಲಿ ಸುಮಾರು 90ಲಕ್ಷ ಗಂಟೆಗಳಷ್ಟು ಕೆಲಸದ ಅವಧಿ ನಷ್ಟವಾಗುತ್ತಿದೆ ಎಂದು ಪ್ರವಾಸಿ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ರಜೆ ಮುಗಿಸಿ ಕೆಲಸಕ್ಕೆ ಮರಳುವ ನೌಕರರು ಸುಮಾರು 22 ನಿಮಿಷಗಳಷ್ಟನ್ನು ರಜೆಯ ವಿಶೇಷಗಳನ್ನು ತಿಳಿಸುವಲ್ಲೇ ಕಳೆಯುತ್ತಾರಲ್ಲದೆ, ಇವರಲ್ಲಿ ಶೇ 17 ರಷ್ಟು ಮಂದಿ ರಜೆಯ ಮಜಾವನ್ನು ರಸವತ್ತಾಗಿ ಹೇಳುತ್ತಾರೆ ಎಂದೂ ವೆಬ್‌ಸೈಟ್ ಲಾಸ್ಟ್‌ಮಿನಿಟ್ ಡಾಟ್ ಕಾಮ್ ತಿಳಿಸಿದೆ.

ಇವರಲ್ಲಿ ಐರಿಷ್ ಜನರಂತೂ ತುಂಬಾ ಸೋಮಾರಿಗಳು ಎಂದಿರುವ ಅಧ್ಯಯನ, ಇವರಲ್ಲಿ ಶೇ 29ರಷ್ಟು ಮಂದಿ ರಜಾ ದಿನದ ಮಜಾದಲ್ಲಿ ಉತ್ಪ್ರೇಕ್ಷೆ ತುಂಬುತ್ತಾರೆ ಎಂದಿದೆ.  ಇದೇ ವೇಳೆ ಜರ್ಮನ್ನರು ತಲಾ 25 ನಿಮಿಷಗಳಷ್ಟು ಕಾಲ ಮತ್ತು ಸ್ವೀಡಿಷ್ ಜನರು 23 ನಿಮಿಷಗಳಷ್ಟು ಸಮಯವನ್ನು ರಜೆಯ ಸವಿಯನ್ನು ಹಂಚಿಕೊಳ್ಳುವುದರಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.