ADVERTISEMENT

ರಬ್ಬಾನಿ ಖರ್ ವಜಾ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಲಾಹೋರ್ (ಪಿಟಿಐ): ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಅವರ ಪತಿಯ ಮಾಲೀಕತ್ವದ ಸಂಸ್ಥೆಯೊಂದು ಅಪಾರ ಪ್ರಮಾಣದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಖರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ವ್ಯಕ್ತಿಯೊಬ್ಬ ಲಾಹೋರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಖರ್ ಅವರ ಪತಿ ಫೈಸಲಾಬಾದ್ ವಿದ್ಯುತ್ ಕಂಪೆನಿಗೆ ಏಳು ಕೋಟಿ ರೂಪಾಯಿಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಹೀನಾ ಅವರನ್ನು ಸಚಿವ ಸ್ಥಾನದಿಂದ ಅನರ್ಹತೆಗೊಳಿಸಬೇಕು ಎಂದು ಮಿಯಾನ್ ಅಸಾದ್ ಎಂಬಾತ ಅರ್ಜಿ ಸಲ್ಲಿಸಿದ್ದಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.