ADVERTISEMENT

ರಷ್ಯಾದ ವಿರುದ್ಧ ಆರ್ಥಿಕ ದಿಗ್ಬಂಧನ: ಉಕ್ರೇನ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಬ್ರಸೆಲ್ (ಎಎಫ್‌ಪಿ): ಕ್ರಿಮಿಯಾ ಗಣರಾಜ್ಯವನ್ನು ಕಾನೂನು ಬಾಹಿರ ವಾಗಿ ತನ್ನ ದೇಶದ ಭೂನಕ್ಷೆಗೆ ಸೇರ್ಪಡೆ ಮಾಡಿಕೊಂಡ ರಷ್ಯಾದ ‘ಹೊಸ ಜಾಗತಿಕ ಆದೇಶ’ಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉಕ್ರೇನ್‌ ಹಂಗಾಮಿ ಪ್ರಧಾನಿ ಅರ್ಸೆನಿ ಯಾಟ್ಸೆನ್ಯುಕ್‌, ರಷ್ಯಾಕ್ಕೆ ಪಾಠ ಕಲಿಸಲು ಜಾಗತಿಕ ಆರ್ಥಿಕ ಒತ್ತಡ ಹೇರಲು ಒತ್ತಾಯಿಸಿದ್ದಾರೆ.

ಐತಿಹಾಸಿಕ ಎನ್ನಬಹುದಾದ ಐರೋಪ್ಯ ಒಕ್ಕೂಟ–ಉಕ್ರೇನ್‌ ಒಪ್ಪಂದಕ್ಕೆ ಸಹಿಹಾಕಿದ ನಂತರ ಮಾತನಾಡಿದ ಯಾಟ್ಸೆನ್ಯುಕ್‌, ‘ವಿಶ್ವದಲ್ಲಿ ಇಂದು ಏನಾಗುತ್ತಿದೆ, ಹೊಸ ಜಾಗತಿಕ ಆದೇಶವನ್ನು ಹೊರಡಿಸಲು ರಷ್ಯಾ ನಿರ್ಧರಿಸಿದೆಯೇ ? ಮಾಸ್ಕೊದ ಧೋರಣೆ ಬದಲಿಸಬೇಕು ಎಂದಾದಲ್ಲಿ ಆರ್ಥಿಕ ಒತ್ತಡ ಹೇರುವುದೊಂದೆ ಪರಿಹಾರ’ ಎಂದು ಅವರು ಅಭಿಪ್ರಾಯಪಟ್ಟರು.

‘ಸೇನಾ ಕಾರ್ಯಾಚರಣೆ ಮೂಲಕ ಮೂರನೇ ಮಹಾ ಯುದ್ಧಕ್ಕೆ ಅಹ್ವಾನ ನೀಡುವುದನ್ನು ಒಪ್ಪಲು ಆಗದು. ಶಾಂತಿ, ಸ್ಥಿರತೆ ಹಾಗೂ ಭದ್ರತೆಗಾಗಿ ನಾವು ಬೆಲೆ ತೆರುವ ಅಗತ್ಯ ಇದೆ’ ಎಂದರು.

ಉಕ್ರೇನ್‌ಗೆ ಒಎಸ್‌ಸಿಇ ಸಮಿತಿ:
ಈ ನಡುವೆ ನೂರು ಜನರನ್ನು ಒಳಗೊಂಡ ಅಂತಾರಾಷ್ಟ್ರೀಯ ವೀಕ್ಷಕರ ಸಮಿತಿಯೊಂದನ್ನು ಉಕ್ರೇನ್‌ಗೆ ಕಳುಹಿಸಿಕೊಡಲಾಗುವುದು ಎಂದು 57 ರಾಷ್ಟ್ರಗಳ ಸದಸ್ಯ ಬಲದ ಐರೋಪ್ಯ ಭದ್ರತೆ ಹಾಗೂ ಸಹಕಾರದ ಸಂಘಟನೆ (ಒಎಸ್‌ಸಿಇ) ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.