
ಲಂಡನ್ (ಐಎಎನ್‌ಎಸ್): ಒಲಿಂಪಿಕ್ಸ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ `ರೋಪ್ ವೇ~ ಮೂಲಕ ಇಳಿಯುತ್ತಿದ್ದ ಲಂಡನ್ ಮೇಯರ್ ಬೋರಿಸ್ ಜಾನ್‌ಸನ್ ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡು ಫಜೀತಿ ಪಟ್ಟ ಪ್ರಸಂಗ ಬುಧವಾರ ಸಂಭವಿಸಿದೆ.
ಈಸ್ಟ್ ಲಂಡನ್ನಿನ ವಿಕ್ಟೋರಿಯಾ ಪಾರ್ಕ್‌ನಲ್ಲಿ ಆಯೋಜಿತವಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್, ಒಂದು ಸಾವಿರ ಅಡಿ ಉದ್ದದ `ರೋಪ್ ವೇ~ಯಲ್ಲಿ ಎರಡು ಕೈಗಳಲ್ಲಿ ಬ್ರಿಟನ್ ರಾಷ್ಟ್ರ ಧ್ವಜ ಹಿಡಿದುಕೊಂಡು ಜಾರುತ್ತಿದ್ದರು.
ಮಾರ್ಗ ಮಧ್ಯೆ `ರೋಪ್ ವೇ~ನ ಜಾರುಕ ಕೆಟ್ಟು ನಿಂತಿತು. ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡ ಮೇಯರ್, `ಹಗ್ಗ ಕೊಡಿ, ಏಣಿ ತನ್ನಿ~ ಎಂದು ಜೋರಾಗಿ ಕೂಗಿಕೊಂಡರು. ಈ ಪ್ರಸಂಗ ಕಂಡ ನೆರೆದಿದ್ದ ಜನರು ಜೋರು ದನಿ ಮಾಡಿ ನಗತೊಡಗಿದರು. ನಂತರ ಮೇಯರ್ ಅವರನ್ನು ಮತ್ತೆ ಮೇಲಕ್ಕೆ ಎಳೆದುಕೊಳ್ಳಲಾಯಿತು.ಮೇಯರ್ ಅವರ ತ್ರಿಶಂಕು ಸ್ಥಿತಿಯ ಬಗ್ಗೆ ಟ್ವಿಟರ್‌ನಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.