ಸಿಡ್ನಿ (ಎಎಫ್‌ಪಿ): ಆಸ್ಟ್ರೇಲಿಯಾದ ಮಾಜಿ ಉಪಪ್ರಧಾನಿ ಲಯೊನೆಲ್ ಬೊವೆನ್ (89) ಭಾನುವಾರ ನಿಧನರಾಗಿದ್ದಾರೆ.
ಬಾಬ್ ಹೆವಾಕ್ ಅವರ ಲೇಬರ್ ಪಕ್ಷ ಅಧಿಕಾರದಲ್ಲಿದ್ದಾಗ ಉಪಪ್ರಧಾನಿ ಆಗಿದ್ದ ಬೊವೆನ್, 21 ವರ್ಷ ಸಂಸತ್ ಸದಸ್ಯರಾಗಿದ್ದರು. 1990ರ ಮಾರ್ಚ್‌ನಲ್ಲಿ ಸಂಸತ್ ಚುನಾವಣೆ ನಡೆಯುವುದಕ್ಕೂ ಮುನ್ನಾ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.