ADVERTISEMENT

ವನೌಟು ದ್ವೀಪದಲ್ಲಿ ಭೂಕಂಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಸಿಡ್ನಿ (ಎಎಫ್‌ಪಿ): ಸಮೀಪದ ವನೌಟು ದ್ವೀಪದಲ್ಲಿ ಶುಕ್ರವಾರ ಭಾರಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 6ರಷ್ಟು ಇತ್ತು. ಪೋರ್ಟ್ ವಿಲಾ ರಾಜಧಾನಿಯ ವಾಯವ್ಯ ಭಾಗದ 116 ಕಿ.ಮೀ ದೂರದಲ್ಲಿರುವ ಸಮುದ್ರದ 21 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಯಾವುದೇ ಸಾವು-ನೋವು ಸಂಭವಿಸಿದ ವರದಿಗಳಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ತಿಳಿಸಿದೆ.

ಇತ್ತೀಚೆಗಿನ ವರ್ಷಗಳಲ್ಲಿ ವನೌಟು ದ್ವೀಪದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದ್ದು, ಮೂರು ಬಾರಿ  ಸಂಭವಿಸಿದ ಭೂಕಂಪದ ತೀವ್ರತೆ 7ರಷ್ಟು ಇತ್ತು ಎಂದು ಭೂಕಂಪನ ತಜ್ಞ ಡೇವಿಡ್ ಜೇಪ್ಸೆನ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.