ADVERTISEMENT

ವಾಯುಮಾಲಿನ್ಯ: ವರ್ಷಕ್ಕೆ 20 ಲಕ್ಷ ಜನರ ಸಾವು...

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ವಾಷಿಂಗ್ಟನ್ (ಪಿಟಿಐ): ವಾಯುಮಾಲಿನ್ಯದಿಂದಾಗಿ ಜಗತ್ತಿನಲ್ಲಿ ಪ್ರತಿ ವರ್ಷ 20 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ ಎಂದು ಆತಂಕಕಾರಿ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

ಮನುಷ್ಯ ಮಾಡುತ್ತಿರುವ ವಾಯು ಮಾಲಿನ್ಯದಿಂದಾಗಿ ಜಗತ್ತಿನ 20 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ವಾಯುಮಾಲಿನ್ಯದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ಮನುಷ್ಯನ ಪರಿಸರ ಮಾಲಿನ್ಯ ಚಟುವಟಿಕೆಗಳಿಂದಾಗಿ ಓಜೋನ್ ಪದರಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ಕನಿಷ್ಠ 4, 70,000 ಜನ ಸಾವಿಗೀಡಾಗುತ್ತಿದ್ದಾರೆ.

ವಾಯುಮಾಲಿನ್ಯದ ಪರಿಣಾಮ ಗಾಳಿಯಲ್ಲಿ ಸೇರುವ ಅಪಾಯಕಾರಿ ಸಣ್ಣ ಕಣಗಳು ಮನುಷ್ಯನ ಶ್ವಾಸಕೋಶ ಪ್ರವೇಶಿಸಿ ಉಸಿರಾಟದ ಕಾಯಿಲೆಗಳು ಸೇರಿದಂತೆ ಕ್ಯಾನ್ಸರ್ ಉಂಟು ಮಾಡಬಲ್ಲವು ಎಂದು ಅಂಕಿ-ಅಂಶಗಳು ತಿಳಿಸಿವೆ.

`ನಮ್ಮ ಅಧ್ಯಯನ ವಾಯು ಮಾಲಿನ್ಯದಿಂದಾಗಿ ಮನುಷ್ಯನ ಆರೋಗ್ಯದ ಮೇಲೆ  ಉಂಟಾಗುವ ಪರಿಣಾಮಗಳ ಕುರಿತು ನಿಖರ ಫಲಿತಾಂಶ ಒಳಗೊಂಡಿದೆ' ಎಂದು ಅಧ್ಯಯನ ನಡೆಸಿರುವ ಉತ್ತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾಸನ್ ವೆಸ್ಟ್ ಹೇಳಿದ್ದಾರೆ.

ಹವಾಮಾನದಲ್ಲಿ ಆಗುತ್ತಿರುವ ವೈಪರೀತ್ಯವು ವಾಯು ಮಾಲಿನ್ಯಕ್ಕೆ ಮತ್ತಷ್ಟು ಇಂಬು ಗೊಡುತ್ತಿದ್ದು ಸಾವಿನ ಪ್ರಮಾಣವನ್ನು ಮತ್ತಷ್ಟೂ ಹೆಚ್ಚಿಸಬಹುದು ಎಂದೂ ಅಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.