ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಅಮೆರಿಕದ ವಿಜ್ಞಾನಿ ದೀಪಕ್ ದಾಸ್ ಅವರು `ಆರೋಗ್ಯಕ್ಕೆ ರೆಡ್ ವೈನ್‌ನ ಉಪಯುಕ್ತತೆ~ ಕುರಿತ ತಮ್ಮ ಸಂಶೋಧನೆಯಲ್ಲಿ ನಕಲಿ ದತ್ತಾಂಶ ಸೇರಿಸಿರುವ ಆರೋಪಕ್ಕೆ ಒಳಗಾಗಿದ್ದಾರೆ.
ಮೂರು ವರ್ಷಗಳ ತನಿಖೆಯಿಂದ ಇದು ಸಾಬೀತಾಗಿದ್ದು, ಸಂಶೋಧನೆಗೆಂದು ವಿಶ್ವವಿದ್ಯಾಲಯವು ದೀಪಕ್ ಅವರ ಪ್ರಯೋಗಾಲಯಕ್ಕೆ ನೀಡಿದ್ದ ಸಹಾಯಧನ ಹಾಗೂ 8.90 ಲಕ್ಷ ಡಾಲರ್ ಅನುದಾನವನ್ನು ತಡೆಹಿಡಿದಿದೆ.
ಕನೆಕ್ಟಿಕಟ್ ವಿಶ್ವವಿದ್ಯಾಲಯದ ಕಾರ್ಡಿಯೊವಾಸ್ಕ್ಯುಲಾರ್ ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಶಸ್ತ್ರಚಿಕಿತ್ಸಾ ಘಟಕದ ಪ್ರೊಫೆಸರ್ ಆಗಿ ದೀಪಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.