ADVERTISEMENT

ವಿಮಾನ ಪತನ: 257 ಸಾವು

ಏಜೆನ್ಸೀಸ್
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ವಿಮಾನ ಪತನ: 257 ಸಾವು
ವಿಮಾನ ಪತನ: 257 ಸಾವು   

ಬೋಫರಿಕ್ (ಅಲ್ಜೀರಿಯಾ) (ಎಎಫ್‌ಪಿ): ಆಲ್ಜೈರ್ಸ್‌ನ ಹೊರವಲಯದಲ್ಲಿ ಮಿಲಿಟರಿ ವಿಮಾನವೊಂದು ಬುಧವಾರ ಪತನಗೊಂಡು, ಅದರಲ್ಲಿದ್ದ ಎಲ್ಲ 257 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿನ ವಾಯುನೆಲೆಯಿಂದ ಟಿಂಡೌಫ್‌ಗೆ ಹೊರಟಿದ್ದ ಇಲ್ಯುಷಿನ್‌ II–76 ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳ ಬಳಿಕ ಪತನಗೊಂಡಿದೆ.

ವಿಮಾನದಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 247 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಇದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ‌ಅಪಘಾತ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು.

ADVERTISEMENT

ನೂರಾರು ಆಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಉಪರಕ್ಷಣಾ ಸಚಿವ ಜನರಲ್ ಅಹ್ಮದ್ ಗೈದ್ ಸಲಾಹ್ ಸ್ಥಳಕ್ಕೆ ಭೇಟಿ ನೀಡಿದ್ದು, ವಿಮಾನ ಪತನದ ಕುರಿತು ತನಿಖೆಗೆ ಆದೇಶಿಸಿದ್ದಾರೆ.  ಅಲ್ಜೀರಿಯಾದಲ್ಲಿ 2003ರ ನಂತರ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ.

ಅಲ್ಜೀರಿಯಾದಲ್ಲಿ ಈ ಹಿಂದೆ ನಡೆದ ವಿಮಾನ ಅಪಘಾತಗಳು

ದಿನಾಂಕ ವಿಮಾನಯಾನ ಸಂಸ್ಥೆ ಮೃತಪಟ್ಟವರು

* ಮಾರ್ಚ್‌, 2003; ಏರ್ ಆಲ್ಜೀರಿ ಬೋಯಿಂಗ್ 737–200; 103

* ಜುಲೈ 2014; ಏರ್ ಆಲ್ಜೀರಿ; 116

* ಫೆಬ್ರುವರಿ 2014: ಮಿಲಿಟರಿ ಪ್ರಯಾಣಿಕ ವಿಮಾನ; 77

* 2012 ಡಿಸೆಂಬರ್; ತರಬೇತಿ ವಿಮಾನಗಳು; ಇಬ್ಬರು ಪೈಲಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.