ವಾಷಿಂಗ್ಟನ್ (ಪಿಟಿಐ): ಖಗೋಳ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಒಂಟಿಯಾಗಿರುವ `ಅನಾಥ~ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.
ಗಾತ್ರದಲ್ಲಿ ಇದು ಗುರು ಗ್ರಹಕ್ಕಿಂತ ಏಳು ಪಟ್ಟು ದೊಡ್ಡದಾಗಿದೆ. ಇದಕ್ಕೆ ಯಾವುದೇ ಗುರುತ್ವಾಕರ್ಷಣೆಯ ಬಂಧನಗಳಿಲ್ಲ. ಈ ಒಂಟಿ ಗ್ರಹವನ್ನು `ಸಿಎಫ್‌ಬಿಡಿಎಸ್‌ಐಆರ್21549~ ಎಂದು ಹೆಸರಿಸಲಾಗಿದ್ದು, ಸದ್ಯ ಅದು ಯಾವುದೇ ನಕ್ಷತ್ರವನ್ನು ಪರಿಭ್ರಮಿಸುತ್ತಿಲ್ಲ.
ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ ಮೊದಲ ಒಂಟಿ ಗ್ರಹ ಇದಾಗಿದೆ. ಈ ಗ್ರಹದ ವಯಸ್ಸು 5ರಿಂದ 12 ಕೋಟಿ ವರ್ಷ ಹಾಗೂ ಮೇಲ್ಮೈ ಉಷ್ಣತೆ ಸುಮಾರು 400 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.