ADVERTISEMENT

ಶಾಲೆ ಮೇಲೆ ದಾಳಿ ಉಗ್ರರಿಗೆ ಗಲ್ಲು

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST

ಇಸ್ಲಾಮಾಬಾದ್‌: ಪೆಶಾವರ ಸೈನಿಕ ಶಾಲೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ತಾಲಿಬಾನ್‌ ಉಗ್ರರನ್ನು ಪಾಕಿಸ್ತಾನ ಬುಧವಾರ ಗಲ್ಲಿಗೇರಿಸಿದೆ.

2014ರ ಡಿಸೆಂಬರ್‌ನಲ್ಲಿ ನಡೆದಿದ್ದ ಈ  ದಾಳಿಯಲ್ಲಿ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 150 ಮಂದಿ ಮೃತಪಟ್ಟಿದ್ದರು.

ಉಗ್ರರಾದ ಅತಾ ಉಲ್ಲಾ ಮತ್ತು ತಾಜ್‌ ಮೊಹಮ್ಮದ್‌ ಅವರು ನಿಷೇಧಿತ ತೆಹರಿಕ್‌ ಎ ತಾಲಿಬಾನ್‌ ಪಾಕಿಸ್ತಾನ್‌ನ (ಟಿಟಿಪಿ) ಸದಸ್ಯರು ಎಂದು ಸೇನೆ ತಿಳಿಸಿದೆ.

ಈ ದಾಳಿಗೆ ಸಂಬಂಧಿಸಿದ ನಾಲ್ವರು ಉಗ್ರರನ್ನು 2015ರ ಡಿಸೆಂಬರ್‌ನಲ್ಲಿ ಗಲ್ಲಿಗೇರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.