ADVERTISEMENT

ಶ್ರೀಲಂಕಾ ಸಚಿವರ ಜತೆ ಭಾರತದ ನಿಯೋಗ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಕೊಲಂಬೊ (ಐಎಎನ್‌ಎಸ್): ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಸಂಸದರ ನಿಯೋಗವು ಎಲ್‌ಟಿಟಿಇ ವಿರುದ್ಧದ ಸಮರದ ನಂತರದ ಸ್ಥಿತಿಗತಿಯ ಬಗ್ಗೆ  ಶ್ರೀಲಂಕಾ ವಿದೇಶಾಂಗ ಸಚಿವರ ಜತೆ ಚರ್ಚಿಸಿತು.

ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ನೇತೃತ್ವದ ಸಂಸದರ ನಿಯೋಗವು ಶ್ರೀಲಂಕಾದ ವಿದೇಶಾಂಗ ಸಚಿವ ಜಿ. ಐ. ಪೈರಿಸ್ ಮತ್ತು ಆರ್ಥಿಕಾಭಿವೃದ್ಧಿ ಸಚಿವ ಬಸಿಲ್ ರಾಜಪಕ್ಸೆ ಅವರೊಂದಿಗೆ ಚರ್ಚಿಸಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.