ಟೊರಾಂಟೊ (ಐಎಎನ್ಎಸ್): ಬ್ಲಾಕ್ ಬೆರಿ ಕಂಪೆನಿ ಮುಖ್ಯಸ್ಥ ಮೈಕ್ ಲಝಾರಿಡಿಸ್ ಅವರಿಗೆ ಬಿಬಿಸಿ ಸಂದರ್ಶನಕಾರ ಭಾರತಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ ಆಕ್ರೋಶಗೊಂಡ ಮೈಕ್ ಸಂದರ್ಶನವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಹೊರನಡೆದರು ಎಂದು ವರದಿಯಾಗಿದೆ.
ಬ್ಲಾಕ್ ಬೆರಿ ಮೊಬೈಲ್ ನ ಭದ್ರತೆಗೆ ಸಂಬಂಧಿಸಿದವಿಷಯದ ಬಗೆಗೆ ಭಾರತ ಹಾಗೂ ಮಧ್ಯ ಪೂರ್ವ ರಾಷ್ಟ್ರಗಳು ಎತ್ತಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಸಂದರ್ಶನಕಾರ ಕೇಳಿದ ಪ್ರಶ್ನೆಗೆ ಕೋಪಗೊಂಡ ಮುಖ್ಯಸ್ಥ ಮೈಕ್ ಸಂದರ್ಶನವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೊರನಡೆದರು.
ಬ್ಲಾಕ್ ಬೆರಿ ಮೊಬೈಲ್ ನಲ್ಲಿನ ಇ-ಮೇಲ್ ಗಳ ಭದ್ರತೆಗೆ ಸಂಬಂಧಿಸಿದಂತೆ ಭಾರತ ಹಾಗೂ ಇತರ ಮಧ್ಯ ಪೂರ್ವ ಏಷ್ಯಾ ರಾಷ್ಟ್ರಗಳು ತೆಗೆದಿರುವ ತಕರಾರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಮೈಕ್ ಅವರು ತಮ್ಮ ಮೊಬೈಲ್ ಕಂಪೆನಿಯ ಇ-ಮೇಲ್ ಸುರಕ್ಷಿತವಾಗಿವೆ ಎಂದು ಸಮರ್ಥಿಸಿಕೊಂಡರು.
ಹಾಗಾದರೆ ಯಾವುದೇ ತಕರಾರು ಸಮಸ್ಯೆಗಳು ಭಾರತದೊಂದಿಗೆ ಇಲ್ಲವೇ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಎಂದು ಮೈಕ್ ಉತ್ತರಿಸಿದರು.
ಮತ್ತೆ ಸಂದರ್ಶನಕಾರ ಹಾಗಾದರೆ ಭಾರತ ಹಾಗೂ ಮಧ್ಯ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿರುವ ಬಿಬಿಸಿ ಕೇಳುಗರಿಗೆ ತಾವು ಭವಿಷ್ಯದಲ್ಲಿ ಬ್ಲಾಕ್ ಬೆರಿ ಮೊಬೈಲ್ ಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಉಪಯೋಗಿಸಿ ಎಂದು ಭರವಸೆ ನೀಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ರೋಸಿ ಹೋದ ಮೈಕ್ ಸಂದರ್ಶನ ಮುಗಿಸಿ ಎನ್ನುತ್ತಾ ಅರ್ಧದಲ್ಲೆ ಎದ್ದು ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.