ADVERTISEMENT

ಸಂಶೋಧನೆ: ವಿಜ್ಞಾನಿಗೆ ₹7.64 ಕೋಟಿ

ಪಿಟಿಐ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಹ್ಯೂಸ್ಟನ್‌: ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್‌ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಭಾರತೀಯ ಮೂಲದ ವಿಜ್ಞಾನಿಯೊಬ್ಬರಿಗೆ ₹7.64 ಕೋಟಿ ಸಹಾಯಧನ ದೊರೆತಿದೆ.

ಹ್ಯೂಸ್ಟನ್‌ ವಿಶ್ವವಿದ್ಯಾಲಯದ ರಾಸಾಯನಿಕ ಮತ್ತು ದ್ವಿಪರಮಾಣು ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ನವೀನ್‌ ವರದರಾಜನ್‌ ಅವರ ಇದುವರೆಗಿನ ಸಂಶೋಧನಾ ಫಲಿತಾಂಶ ಪರಿಗಣಿಸಿ, ಟೆಕ್ಸಾಸ್‌ನ ಕ್ಯಾನ್ಸರ್‌ ತಡೆಗಟ್ಟುವಿಕೆ ಮತ್ತು ಸಂಶೋಧನಾ ಸಂಸ್ಥೆ (ಸಿಪಿಆರ್‌ಐಟಿ) ಈ ಸಹಾಯಧನ ನೀಡಿದೆ.

ಆನಂದ್‌ ಅವರ ಸಹೋದ್ಯೋಗಿ, ಜೀವವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಾಂಗ್ಯುಕ್‌ ಚುಂಗ್‌ ಅವರಿಗೆ ₹5.29 ಕೋಟಿ ಸಹಾಯಧನ ದೊರೆತಿದೆ.

ADVERTISEMENT

ನವೀನ್‌ ಅವರು ಟಿ–ಜೀವಕೋಶ ಬಳಸಿ ನೀಡುವ ಚಿಕಿತ್ಸಾ ವಿಧಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಸಂಶೋಧನಾ ಯೋಜನೆ ಮಾಡಬೇಕಿದೆ. ಸಾಂಗ್ಯುಕ್‌, ಕುತ್ತಿಗೆ ಕ್ಯಾನ್ಸರ್‌ನ ಚಿಕಿತ್ಸೆಗೆ ಗುರಿಯಾಗಿಸಬೇಕಿರುವ ಜೀವಕೋಶಗಳ ಬಗ್ಗೆ ಅಧ್ಯಯನ ಮಾಡಬೇಕಿದೆ.

‘ಸಂಶೋಧನೆಯಡಿ ನಾವು ಪ್ರತಿಯೊಂದು ಟಿ–ಜೀವಕೋಶವನ್ನೂ ಅಧ್ಯಯನ ಮಾಡಬೇಕು. ಅದರ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು’ ಎಂದು ಆನಂದ್‌ ವರದರಾಜನ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.