ADVERTISEMENT

ಸಾರ್ಕ್ಗೆ ಪ್ರಥಮ ಮಹಿಳಾ ಮಹಾ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ಢಾಕ (ಐಎಎನ್‌ಎಸ್): ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲ್ಡೀವ್ಸ್‌ನ 36ರ ಹರೆಯದ ವಕೀಲೆ ಫಾತಿಮಾತ್ ಧಿಯಾನಾ ಸಯೀದ್ ಮಾರ್ಚ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಾಲಿ ಪ್ರಧಾನ ಕಾರ್ಯದರ್ಶಿ ಭಾರತದ  ರಾಜತಾಂತ್ರಿಕ ಶೀಲಕಾಂತ್ ಶರ್ಮಾ ಅವರ ಅಧಿಕಾರ ಅವಧಿ ಫೆ. 28ಕ್ಕೆ ಕೊನೆಗೊಳ್ಳಲಿದ್ದು, ಮುಂದಿನ ಮೂರು ವರ್ಷ ಫಾತಿಮಾ ಅವರು ಈ ಹುದ್ದೆ ನಿಭಾಯಿಸಲಿದ್ದಾರೆ. ಅವರು ಮಾಲ್ಡೀವ್ಸ್‌ನ ಮಾಜಿ ಅಟಾರ್ನಿ ಜನರಲ್ ಕೂಡ ಹೌದು.  ಮುಂದಿನ ನವೆಂಬರ್ 10-11ರಂದು ಮಾಲ್ಡೀವ್ಸ್‌ನಲ್ಲಿ 17ನೇ ಸಾರ್ಕ್ ಸಮಾವೇಶ ನಡೆಯಲಿದ್ದು, ಅದನ್ನು ನಿಭಾಯಿಸುವ ಪ್ರಮುಖ ಹೊಣೆಗಾರಿಕೆ ಫಾತಿಮಾ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.