ADVERTISEMENT

ಸಾರ್ಕ್: ಮಹಿಳಾ ಮಹಾ ಕಾರ್ಯದರ್ಶಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಕಠ್ಮಂಡು (ಪಿಟಿಐ): `ಸಾರ್ಕ್~ನ ಮೊದಲ ಮಹಿಳಾ ಮಹಾ ಕಾರ್ಯದರ್ಶಿ  ಮಾಲ್ಡೀವ್ಸ್‌ನ ಫಾತಿಮತ್ ಧಿಯಾನ ಸಯೀದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

 ಮಾಲ್ಡೀವ್ಸ್‌ನ ಆಂತರಿಕ ರಾಜಕೀಯದಲ್ಲಿ ಸಯೀದ್ ತೊಡಗಿಕೊಂಡಿರುವ ಬಗೆಗೆ ಉಂಟಾಗಿರುವ ವಿವಾದದ ನಡುವೆಯೇ ಅವರು ಪದತ್ಯಾಗ ಮಾಡಿದ್ದಾರೆ. ಸಯೀದ್ ರಾಜೀನಾಮೆಯನ್ನು ಕಠ್ಮಂಡುವಿನಲ್ಲಿರುವ `ಸಾರ್ಕ್~ ಆಡಳಿತ ಕಚೇರಿ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಯೀದ್ ಅವರು 2011ರ ಮಾರ್ಚ್1ರಂದು ಅಧಿಕಾರ ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.