ADVERTISEMENT

ಸಿರಿಯಾ: 100 ಐಎಸ್ ಉಗ್ರರ ಶರಣಾಗತಿ

ಏಜೆನ್ಸೀಸ್
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ಕೊಬಾನೆ, ಸಿರಿಯಾ: ಸಿರಿಯಾದ ಪ್ರಮುಖ ನೆಲೆ ರಖ್ಖಾದಲ್ಲಿ 24 ಗಂಟೆ ಅವಧಿಯಲ್ಲಿ 100ಕ್ಕೂ ಹೆಚ್ಚು ಐಎಸ್ ಉಗ್ರರು ಶರಣಾಗತರಾಗಿದ್ದಾರೆ ಎಂದು ಅಮೆರಿಕ ನೇತೃತ್ವದ ಮೈತ್ರಿಪಡೆ ಹೇಳಿದೆ.

ಯೋಧರು ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಬಲ್ಯ ಸಾಧಿಸಿದ್ದು, ಉಗ್ರರನ್ನು ನಗರದಿಂದ ಹೊರಗಿಡಲಾಗಿದೆ. ಆದರೆ ಶರಣಾಗತರಾಗಿರುವವರ ಪೈಕಿ ವಿದೇಶಿ ಉಗ್ರರಿಗೆ ರಖ್ಖಾ ತೊರೆಯಲು ಅವಕಾಶ ನೀಡಿಲ್ಲ.

ಕಳೆದ ಐದು ದಿನಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಐಎಸ್ ಉಗ್ರರು ತಮ್ಮ ಕುಟುಂಬದ ಜೊತೆ ಭದ್ರನೆಲೆಯಾದ ರಖ್ಖಾವನ್ನು ತೊರೆದಿದ್ದಾರೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ವಿಚಕ್ಷಣಾ ಕೇಂದ್ರದ ನಿರ್ದೇಶಕ ರಮಿ ಅಬ್ದೆಲ್ ರಹಮಾನಿ ಹೇಳಿದ್ದಾರೆ.

ADVERTISEMENT

ಅಮೆರಿಕ ಬೆಂಬಲಿತ ಸಿರಿಯಾ ಸೇನೆ ಮುಂದೆ ಐಎಸ್ ಉಗ್ರರು ತಡರಾತ್ರಿಯೇ ಶರಣಾಗಿದ್ದಾರೆ ಎಂದು ರಖ್ಖಾದ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ಆಡಳಿತ ನೋಡಿಕೊಳ್ಳಲು ಸಿರಿಯಾ ಸೇನೆ ನೇಮಿಸಿರುವ ತಾತ್ಕಾಲಿಕ ಮಂಡಳಿಯ ಸದಸ್ಯರು ಬುಡಕಟ್ಟು ನಾಯಕರ ಜತೆ ವಾರದಿಂದ ಮಾತುಕತೆ ನಡೆಸುತ್ತಿದ್ದು, ನಾಗರಿಕರ ಸುರಕ್ಷತೆಗೆ ಅನುಕೂಲವಾಗುವ ವಾತಾವರಣ ನಿರ್ಮಿಸುವಲ್ಲಿ ತೊಡಗಿದ್ದಾರೆ.

ಒಂದು ಅವಧಿಯಲ್ಲಿ ಜಿಹಾದಿಗಳ ರಾಜಧಾನಿ ಎಂದು ಕರೆಸಿಕೊಂಡಿದ್ದ ಹಿಂಸಾಪೀಡಿತ ರಖ್ಖಾ ನಗರವನ್ನು ನಾಗರಿಕರು ತೊರೆದು, ಪಲಾಯನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.