ADVERTISEMENT

ಸ್ಕರ್ಟ್ ಧರಿಸಿದ ಚಾಲಕರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಲಂಡನ್ (ಪಿಟಿಐ): ಬೇಸಿಗೆಯ ಭೇಗೆಯಿಂದ ತಪ್ಪಿಸಿಕೊಳ್ಳಲು ನಿಕ್ಕರ್ ಧರಿಸಿಕೊಂಡು ಕಚೇರಿಗೆ ಬರುತ್ತಿದ್ದ ರೈಲು ಚಾಲಕರಿಗೆ ಕಂಪೆನಿ ನಿಷೇಧ ಹೇರಿದ ಪರಿಣಾಮ ಅವರೀಗ ಸ್ಕರ್ಟ್ ಧರಿಸುವ ಮೂಲಕ ರಂಗೋಲಿ ಕೆಳಗೆ ತೂರಲು ಮುಂದಾಗಿದ್ದಾರೆ.

ಸ್ವೀಡನ್‌ನ ರೋಸ್ಲಗ್ಸ್‌ಬನನ್ ಮಾರ್ಗದ ರೈಲು ಚಾಲಕರು 2 ವಾರಗಳಿಂದ ಸ್ಕರ್ಟ್ ತೊಟ್ಟು  ಕಚೇರಿಗೆ ಹಾಜರಾಗುತ್ತಿದ್ದಾರೆ.  ಇದಕ್ಕೂ ಮೊದಲು ಬೇಸಿಗೆಯ ಕಾರಣ ಚಾಲಕರು ನಿಕ್ಕರ್ ಅಥವಾ ಸಣ್ಣ ಪ್ಯಾಂಟ್ ತೊಟ್ಟು ಕಚೇರಿಗೆ ಹಾಜರಾಗುತ್ತಿದ್ದರು. ಆದರೆ ಕಂಪೆನಿ ಕೆಲದಿನಗಳ ಹಿಂದೆ ಇದಕ್ಕೆ ನಿರ್ಬಂಧ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.